July 23, 2025 4:22 am

ಸುರಂಗ ಮಾರ್ಗದಲ್ಲೂ ಡಬ್ಬಲ್ ಡೆಕ್ಕರ್ !

ಸುರಂಗ ಮಾರ್ಗದಲ್ಲೂ ಡಬ್ಬಲ್ ಡೆಕ್ಕರ್ !

ಬಿಗ್ ಥ್ಯಾಂಕ್ಸ್” ಎನ್ನುತ್ತಾರೆ ಪ್ರತಿದಿನ ಬನಶಂಕರಿಯಿಂದ ಬೆಳ್ಳಂದೂರು ಐಟಿ ಪಾರ್ಕ್‌ಗೆ ಕೆಲಸಕ್ಕೆ ತೆರಳುವ ಮಹೇಂದ್ರಕುಮಾರ್. ಇದು ಅವರೊಬ್ಬರ ಅಭಿಪ್ರಾಯವೂ ಅಲ್ಲ, ಅವರೊಬ್ಬರ ಅನುಭವವೂ ಅಲ್ಲ. ಸಾವಿರಾರು ಮಂದಿ ದಿನವೂ ಇಂತಹ ಕಹಿ ಅನುಭವಗಳಿಗೆ ಮುಖಾಮುಖಿಯಾಗುತ್ತಿದ್ದಾರೆ ಎಂಬುದು ಸತ್ಯ. ಜನರ ಸಂಕಷ್ಟಗಳಿಗೆ ಕೊನೆ ಹಾಡಲೆಂದೇ ನಿರ್ಮಾಣವಾಗಿರುವುದು ಡಬಲ್ ಡೆಕ್ಕರ್‌ರಸ್ತೆ. ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಾವೇ ಕಾರು ಚಲಾಯಿಸಿಕೊಂಡು ಹೋಗುವ ಮೂಲಕ ರಾಗಿಗುಡ್ಡದಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್ ತನಕ ಈ ರಸ್ತೆಯಲ್ಲಿ ವಾಹನಗಳ ಪ್ರಾಯೋಗಿಕ ಸಂಚಾರಕ್ಕೆ ಚಾಲನೆ ನೀಡಿದ್ದಾರೆ.
ಈ 3.36 ಕಿ.ಮೀ. ಮಾರ್ಗದಲ್ಲಿ ನಾಲ್ಕು ಮೆಟ್ರೋ ನಿಲ್ದಾಣಗಳು ಇವೆ. ರಾಗಿಗುಡ್ಡ, ಜಯದೇವ ಆಸ್ಪತ್ರೆ, ಬಿಟಿಎಂ ಬಡಾವಣೆ ಮತ್ತು ಸಿಲ್ಕ್ ಬೋರ್ಡ್ ಜಂಕ್ಷನ್ ನಿಲ್ದಾಣಗಳು. ಈ ಡಬಲ್ ಡೆಕ್ಕರ್ ಮಾರ್ಗದಲ್ಲಿ ಸಂಚರಿಸುವ ವಾಹನಗಳಿಗೆ ಈ ಇಂತಹುದೊಂದು ಡಬ್ಬಲ್ ಡೆಕ್ಕರ್ ರಸ್ತೆ ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಅಸ್ತಿತ್ವಕ್ಕೆ ಬಂದಿದೆ. ಇದೇ ಮಾದರಿಯಲ್ಲಿ ಇನ್ನಷ್ಟು ರಸ್ತೆಗಳನ್ನು ನಿರ್ಮಾಣ ಮಾಡುವ ಚಿಂತನೆಯ ಜೊತೆಗೆ ಟನೆಲ್ ಮಾರ್ಗದಲ್ಲಿಯೂ ಈ ಮಾದರಿಯನ್ನು ಅನುಸರಿಸಲು ಸಾಧ್ಯವೇ ಎಂದು ಅಧಿಕಾರಿಗಳು ಯೋಚಿಸಿದ್ದಾರೆ.
ಅಂದರೆ ಹೆಬ್ಬಾಳ ಮತ್ತು ಅರಮನೆ ಮೈದಾನದ ನಡುವೆ (ಮೇಖ ಸರ್ಕಲ್) ಸುರಂಗ ಮಾರ್ಗವನ್ನು ನಿರ್ಮಿಸಲು ಈಗಾಗಲೇ ಬಿಬಿಎಂಪಿ ಉದ್ದೇಶಿಸಿದೆ. ಇಲ್ಲಿಯೂ ಡಬ್ಬಲ್ ಡೆಕ್ಕರ್ ರಸ್ತೆ ನಿರ್ಮಿಸಿದರೆ ಹೇಗೆ ಎಂಬುದು ಯೋಚನೆ. ಇದರ ಅಂತರ ಸುಮಾರು ಮೂರು ಕಿ.ಮೀ. ಇಲ್ಲಿ ನಟನಲ್ ರಸ್ತೆಗೆ ಬಹುರಾಷ್ಟ್ರೀಯ ಸಂಸ್ಥೆ ಅಲ್ಟಿನೋಕ್ ಕನ್ಸಲ್ಟಿಂಗ್ ಎಂಜಿನಿಯರಿಂಗ್ ವಿನ್ಯಾಸವನ್ನು ರೂಪಿಸಿ ಬಿಬಿಎಂಪಿಗೆ ಡಿಪಿಆರ್‌ನ್ನು ಸಲ್ಲಿಸಿದ್ದಾಗಿದೆ.
ಈ ಟನಲ್ ರಸ್ತೆಯ ಕೆಳಸ್ಥರದಲ್ಲಿ ಮೂರು ಮಾರ್ಗಗಳಿದ್ದರೆ ಮೇಲ್ಸ್ಥರದಲ್ಲಿ ಎರಡು ಮಾರ್ಗಗಳಿರುತ್ತವೆ. ಇಂತಹ ಮಾರ್ಗಗಳನ್ನು ಜಾರಿಗೆ ತಂದರೆ ಮರಗಳನ್ನು ಕಡಿದು ಉರುಳಿಸುವ ಪ್ರಮೇಯ ಉದ್ಭವಿಸುವುದಿಲ್ಲ. ಖರ್ಚೂ ಕೂಡ ಕಡಿಮೆ. ಭವಿಷ್ಯದ ದೃಷ್ಟಿಯಿಂದ ಇದು ಹೆಚ್ಚು ಉಪಯುಕ್ತ ಎನ್ನುತ್ತಾರೆ ಅಧಿಕಾರಿಗಳು. ಈ ಬಗ್ಗೆ ಇನ್ನಷ್ಟು ಅಧ್ಯಯನಗಳು ನಡೆಯುತ್ತಿದೆ.
ವಿದೇಶಗಳಲ್ಲಿ ಇಂತಹ ಡಬಲ್ ಡೆಕ್ಕರ್ ಟನಲ್ ರಸ್ತೆಗಳು ಜಾರಿಗೆ ಬಂದಿವೆ. ಬೆಂಗಳೂರಿನಲ್ಲಿಯೂ ಇದು ಸಾಧ್ಯವಾದರೆ ಭಾರತದಲ್ಲಿಯೇ ಪ್ರಥಮವನ್ನು ಸಾಧಿಸಿದ ಹೆಗ್ಗಳಿಕೆ ನಮ್ಮದಾಗಲಿದೆ ಎಂಬುದು ನಿಶ್ಚಿತ.

ಡಬ್ಬಲ್ ಡೆಕ್ಕರ್ ಸಾಧ್ಯತೆ ಇರುವ ನಾಲ್ಕು ಕಾರಿಡಾರ್‌ಗಳು
ಮುಂದಿನ ಎರಡು ಹಂತಗಳಲ್ಲಿ ನಾಲ್ಕು ಕಾರಿಡಾರ್‌ಗಳ ಉದ್ದಕ್ಕೆ ಮೆಟ್ರೋ ಮತ್ತು ಪ್ರೈಓವರ್‌ಗಳನ್ನು ನಿರ್ಮಾಣ ಮಾಡುವ ಸಾಧ್ಯತೆಗಳ ಬಗ್ಗೆ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಶನ್ ಲಿ.

(ಬಿಎಂಆರ್‌ಸಿಎಲ್) ಅಧ್ಯಯನವನ್ನು ನಡೆಸುತ್ತಿದೆ. ಈ ನಾಲ್ಕು ಕಾರಿಡಾರ್‌ಗಳೆಂದರೆ:
ಜೆಪಿ ನಗರ ನಾಲ್ಕನೇ ಹಂತದಿಂದ ಹೆಬ್ಬಾಳ ವರೆಗಿನ ಕಾರಿಡಾರ್-1 (29.2 4.2.)
ಹೊಸಹಳ್ಳಿಯಿಂದ ಕಡಬಗೆರೆ ವರೆಗಿನ 5-2 (11.45 5.2.)
ಸರ್ಜಾಪುರದಿಂದ ಇಬ್ಬಲೂರು ವರೆಗಿನ ಕಾರಿಡಾರ್-3 (14 ಕಿ.ಮೀ)
ಅಗರದಿಂದ ಕೋರಮಂಗಲ ಮೂರನೇ ಬ್ಲಾಕ್ ವರೆಗಿನ 5-4 (2.45 3.2.)

ಮೆಟ್ರೋ ನಿಲ್ದಾಣವನ್ನು ಸಂಪರ್ಕಿಸುವ ಅವಕಾಶವಿರುವುದಿಲ್ಲ. ಅದೇನಿದ್ದರೂ ಕೆಳಗಿನ ಮಾರ್ಗದಲ್ಲಿ ಸಂಚರಿಸುವವರಿಗೆ ಮಾತ್ರ. ಈ ಪ್ರೈಓವರ್‌ನಲ್ಲಿ ಮೂರು ಯೂ-ಟರ್ನ್‌ಗಳಿರುತ್ತವೆ. ಅವು ಕೇವಲ ತುರ್ತು ಅಗತ್ಯಗಳಿಗೆ ಮಾತ್ರ. ಅವುಗಳನ್ನು ಸದ್ಯ ಮುಚ್ಚಲಾಗಿದೆ. ಈ ರಸ್ತೆಯಲ್ಲಿ ಟ್ರಾಫಿಕ್ ದಟ್ಟಣೆ ಎಷ್ಟರ ಮಟ್ಟಿಗೆ ಇರುತ್ತದೆ. ರಾತ್ರಿ ವೇಳೆ ವಾಹನಗಳ ಸಂಚಾರ ಎಷ್ಟಿರುತ್ತದೆ, ಸುರಕ್ಷತೆಗೆ ಕ್ರಮಗಳೇನು ಎಂಬುದನ್ನು ಟ್ರಾಫಿಕ್ ಪೊಲೀಸರು ಅಧ್ಯಯನ ನಡೆಸಿದ್ದಾರೆ. ಸದ್ಯಕ್ಕೆ ಈ ಮಾರ್ಗದಲ್ಲಿನ ವೇಗ ಮಿತಿಯನ್ನು (Speed limit) 40 ಕಿ.ಮೀ.ಗೆ ನಿಗದಿ ಮಾಡಲಾಗಿದೆ.

LEAVE A REPLY

Please enter your comment!
Please enter your name here

Related Articles

TRENDING ARTICLES