July 21, 2025 9:08 pm

ವಿಜ್ಞಾನದಲ್ಲಿ ಪದವಿ ಪೂರ್ವ ಶಿಕ್ಷಣ ಮುಗಿಸಿರುವ ವಿದ್ಯಾರ್ಥಿಗಳು ಮುಂದಿನ ವಿದ್ಯಾಭ್ಯಾಸಕ್ಕೆ ಬೇಡಿಕೆ ಇರುವ ವಿವಿಧ ಪದವಿಗಳನ್ನು ಆಯ್ಕೆ ಮಾಡಿಕೊಳ್ಳಬಹುದು.

ಪದವಿ ಪೂರ್ವ ಶಿಕ್ಷಣದ ನಂತರ ಎಲ್ಲರೂ ಎಂಜಿನಿಯರಿಂಗ್, ಮೆಡಿಕಲ್ ಮಾಡಲಾಗುವುದಿಲ್ಲ. ಅದಕ್ಕೆ ಮನೆಯ ಆರ್ಥಿಕ ಪರಿಸ್ಥಿತಿ, ವಿದ್ಯಾರ್ಥಿ ಪಡೆದ ಅಂಕ ಮತ್ತು ವಿದ್ಯಾರ್ಥಿಗಿರುವ ಆಸಕ್ತಿ ಹಾಗೂ ಉದ್ಯೋಗಾವಕಾಶಗಳನ್ನು ಅವಲಂಭಿಸಿ ಮುಂದಿನ ವಿದ್ಯಾಭ್ಯಾಸವನ್ನು ನಿರ್ಧಾರ ಮಾಡಬೇಕಾಗುತ್ತದೆ.

ಇಂದು ದ್ವಿತೀಯ ಪಿಯುಸಿಯಲ್ಲಿ ವಿಜ್ಞಾನ ವಿಷಯ ಓದಿದ ವಿದ್ಯಾರ್ಥಿಗಳು ಬಿಎಸ್‌ಸಿಯಲ್ಲಿ ಉತ್ತಮ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಂಡರೆ ಉತ್ತಮ ವೇತನದ ಆಕರ್ಷಕ ಕೆಲಸ ಗಿಟ್ಟಿಸಿಕೊಳ್ಳಲು ವಿಪುಲ ಅವಕಾಶವಿದೆ. ಹಾಗಾದರೆ ಯಾವ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದು ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಬಿಎಸ್‌ಸಿ ಇನ್ ನ್ಯೂಕ್ಲಿಯರ್ ಮೆಡಿಸಿನ್ ಕೋರ್ಸ್ ಮಾಡಿದರೆ ಆರೋಗ್ಯ ಕ್ಷೇತ್ರದಲ್ಲಿ ವಿಫುಲವಾದ ಉದ್ಯೋಗಾವಕಾಶ ಲಭ್ಯವಿದೆ. ಆರಂಭದಲ್ಲಿ 60 ಸಾವಿರ ರೂ ಗಳವರೆಗೆ ವೇತನ ದೊರಕಲಿದೆ. ಮುಂದೆ ಅನುಭವದ ಆಧಾರ ಮೇಲೆ ಮಾಸಿಕ ಒಂದುವರೆ ಲಕ್ಷ ರೂ ತನಕ ವೇತನವನ್ನು ಪಡೆಯಬಹುದು. ಈ ಪದವಿಯಿಂದ ಕ್ಯಾನ್ಸರ್, ಹೃದ್ರೋಗ ಹಾಗೂ ನರರೋಗ ಕ್ಷೇತ್ರದಲ್ಲಿ ಹೆಚ್ಚಿನ ಉದ್ಯೋಗಾವಕಾಶ ಲಭ್ಯವಿರುತ್ತದೆ.
ಬಿಎಸ್‌ಸಿ ಇನ್ ಅಪ್ಲೋಮೆಟ್ರಿ ಕೋರ್ಸ್. ಇದು ನಾಲ್ಕು ವರ್ಷದ ಕೋರ್ಸ್. ಕಣ್ಣಿಗೆ ಸಂಬಂಧ ಪಟ್ಟ ಆರೋಗ್ಯ ಕ್ಷೇತ್ರದಲ್ಲಿ ಉದ್ಯೋ ಉದ್ಯೋಗಾವಕಾಶ ಲಭ್ಯವಿದೆ. ಈ ಕೋರ್ಸ್ ಕರ್ನಾಟಕದ ಮೈಸೂರಿನ ಜೆಎಸ್‌ಎಸ್ ವೈದ್ಯಕೀಯ ಕಾಲೇಜಿನಲ್ಲಿ ಲಭ್ಯವಿದೆ. ಅದೇ ರೀತಿ ತಮಿಳುನಾಡು ಸಹಿತ ಬೇರೆ ಬೇರೆ ರಾಜ್ಯಗಳಲ್ಲೂ ಈ ಕೋರ್ಸ್ ಅನ್ನು ಮಾಡಬಹುದು.
ಬಿಎಸ್‌ಸಿ ಅಗಿಕಲ್ಲರ್ ಮಾಡಬಹುದು. ಈ ಕೋರ್ಸ್ ಅತ್ಯಂತ
ಕಡಿಮೆ ವೆಚ್ಚದಲ್ಲಿ ಮುಗಿಸಬಹುದು. ಅಂದರೆ ಕೋರ್ಸ್ ವೆಚ್ಚ 60 ಸಾವಿರ ರೂ ನಿಂದ 2 ಲಕ್ಷ ರೂ ತನಕ ವೆಚ್ಚವಾಗುತ್ತದೆ. ನಾಲ್ಕು ವರ್ಷದ ಕೃಷಿ ಪದವಿ ಕೋರ್ಸ್ ಮುಗಿಸಿದರೆ, ಈ ಪದವಿಯವರಿಗೆ ಸರ್ಕಾರಿ ವಲಯ, ಖಾಸಗಿ ವಲಯ ಹಾಗೂ ವಿದೇಶದಲ್ಲೂ ವಿಫುಲವಾದ ಉದ್ಯೋಗಾವಕಾಶಗಳಿವೆ.
ಈ ಪದವಿ ಮಾಡಿದವರು ಕೃಷಿ ಇಲಾಖೆಯ ಅಧಿಕಾರಿ ಕೂಡ ಆಗಬಹುದು. ಇನ್ನು ಕೃಷಿ ಇಲಾಖೆಯಲ್ಲಿರುವ ಅಸಿಸ್ಟಂಟ್ ಮ್ಯಾನೇಜರ್, ಪ್ಲಾಂಟೇಷನ್ ಮ್ಯಾನೇಜರ್, ಕೃಷಿ ಸಂಶೋಧನಾ ವಿಜ್ಞಾನಿ, ಅಗ್ನಿಕಲ್ಟರ್ ಡೆವಲಪಮೆಂಟ್ ಆಫೀಸರ್, ಪ್ಲಾಂಟ್ ಬೀಡರ್, ಸೀಡ್ ಟೆಕ್ನಾಲಜಿಸ್ಟ್ ಹುದ್ದೆಗಳಿಗೂ ಅರ್ಜಿ ಸಲ್ಲಿಸಬಹುದು. ಅಲ್ಲದೆ ಕೃಷಿಕ್ಷೇತ್ರದಲ್ಲಿ ಆಸಕ್ತಿ ಇದ್ದವರು ಈ ಕೋರ್ಸ್ ಅನ್ನು ಮಾಡುವುದರಿಂದ ಮಾದರಿ ಕೃಷಿಕರಾಗಬಹುದು.
ಬಿಎಸ್‌ಸಿ ಕಂಪ್ಯೂಟರ್ ಸೈನ್ಸ್ ಕೋರ್ಸ್‌ಗೆ ಮೊದಲಿನಿಂದಲೂ ಅಪಾರ ಬೇಡಿಕೆಯಿದೆ. ಈ ಕೋರ್ಸ್ ಮಾಡಲು 30 ಸಾವಿರ ರೂಪಾಯಿಂದ 2 ಲಕ
ರೂಪಾಯಿ ತನಕ ವೆಚ್ಚವಾಗುತ್ತದೆ. ಆರಂಭದಲ್ಲಿ 40-50 ಸಾವಿರ ವೇತನದ ಕೆಲಸ ಸಿಗಲಿದೆ. 3 ರಿಂದ 4 ವರ್ಷ ಅನುಭವವಾದರೆ 1 ರಿಂದ 2 ಲಕ್ಷ ರೂಪಾಯಿತನಕ ವೇತನ ಪಡೆಯಬಹುದು. ಸಾಫ್ಟ್‌ವೇರ್ ಎಂಜಿನಿಯರ್, ವೆಬ್ ಡೆವಲಪರ್, ಆ್ಯಪ್ ಡೆವಲಪರ್, ಸುಪ‌ರ್ ವೈಸರ್, ಟೀಮ್ ಲೀಡ‌ರ್, ನೆಟ್ವರ್ಕ್ ಎಂಜಿನಿಯರ್, ಸಿಸ್ಟಮ್ ಅಡ್ಡಿನ್ ಸಹಿತ ಹಲವಾರು ರೀತಿಯ ಉದ್ಯೋಗಾವಕಾಶ ಈ ಪದವಿಯಿಂದ ಲಭ್ಯವಿದೆ.
బిఎనోసి ఇనా ఎవియండనా ಕೋರ್ಸ್ ಶುಲ್ಕ 80 ಸಾವಿರ ರೂಪಾಯಿ ಯಿಂದ 3 ಲಕ್ಷ ರೂಪಾಯಿ ತನಕ ಇರುತ್ತದೆ. ಈ ಪದವಿ ಪಡೆದವರು ಪ್ರೈಟ್ ಟೆಸ್ಟ್ ಎಂಜಿನಿಯರ್, ಕಾರ್ಗೊ ಮ್ಯಾನೇಜರ್. ಏರ್ ಟ್ರಾಫಿಕ್ ಕಂಟ್ರೋಲರ್, ಏರ್‌ ಪೋರ್ಟ್ ಗೌಂಡ್ ಡ್ಯೂಟಿ ಮ್ಯಾನೇಜರ್, ಫೈಟ್ ಅಟೆಂಡೆಂಟ್, ಫೈಲಟ್ ಹುದ್ದೆಗಳನ್ನು ಪಡೆಯಲು ಅವಕಾಶವಿರುತ್ತದೆ. ಕನಿಷ್ಟ 70 ಸಾವಿರ ರೂ ವೇತನದಿಂದ ಈ ಹುದ್ದೆಗಳು ಆರಂಭವಾಗುವುದಲ್ಲದೆ, ಎರಡು

ಮೂರು ವರ್ಷದಲ್ಲಿ ಮೂರು ಲಕ್ಷ ರೂ ತನಕ ವೇತನ ಏರಿಕೆಯಾಗಲಿದೆ.
ಬಿಎಸ್‌ಸಿ ಇನ್ ಫುಡ್ ಟೆಕ್ನಾಲಜಿ ಕೋರ್ಸ್ ಮಾಡಿದರೆ ಸರ್ಕಾರಿ ಹಾಗೂ ಖಾಸಗಿ ಕ್ಷೇತ್ರದಲ್ಲೂ ಅಪಾರ ಉದ್ಯೋಗಾವಕಾಶ ಲಭ್ಯವಾಗಲಿದೆ. ಮೂರು ವರ್ಷದ ಕೋರ್ಸ್‌ಗೆ 30 ರಿಂದ 60 ಸಾವಿರ ರೂಪಾಯಿ ವೆಚ್ಚವಾಗುತ್ತದೆ. ಈ ಪದವಿಗೆ ಫುಡ್ ಟೆಕ್ನಾಲಜಿಸ್ಟ್, ಫುಡ್ ಕ್ವಾಲಿಟಿ ಮ್ಯಾನೇಜರ್, ಥೆರಪಿಸ್ಟ್, ಪ್ರೊಡಕ್ಷ ಪ್ರೋಸೆಸ್ ಡವಲಪ್‌ ಮೆಂಟ್ ಸೈಂಟಿಸ್ಟ್, ಫುಡ್ ಕ್ವಾಲಿಟಿ ಕಂಟ್ರೋಲ‌ರ್, ರೀಸರ್ಚ್ ಸೈಂಟಿಸ್ಟ್ ಹುದ್ದೆಗಳು ಲಭ್ಯವಿರುತ್ತದೆ.
ಬಿಎಸ್‌ಸಿ ಇನ್ ಸೈಬ‌ರ್ ಸೆಕ್ಯುರಿಟಿ ಮೂರು ವರ್ಷದ ಕೋರ್ಸ್‌ಗೆ ಒಂದರಿಂದ ಮೂರು ಲಕ್ಷ ರೂಪಾಯಿ ತನಕ ವೆಚ್ಚವಾಗುತ್ತದೆ. ಆರಂಭದಲ್ಲೇ ಸುಮಾರು 70 ಸಾವಿರ ರೂ ಗಳವರೆಗೆ ವೇತನ ಪಡೆಯಬಹುದು. ಸೈಬರ್ ಸೆಕ್ಯುರಿಟಿ ಆಫೀಸರ್, ಸೈಬರ್ ಕ್ರೈಮ್ ಆಫೀಸರ್, ಚೀಫ್ ಇನ್ಫೋ ಆಫೀಸರ್, ಸೆಕ್ಯುರಿಟಿ ಸ್ಪೇಷಲಿಸ್ಟ್, ಸೆಕ್ಯುರಿಟಿ ಕನ್ಸಲ್ಟಂಟ್, ಸಾಫ್ಟ್‌ವೇರ್ ಡೆವಲಪರ್ ಆಗಿ ಕಾರ್ಯ ನಿರ್ವಹಿಸಬಹುದು. ಇಲ್ಲವೆ ಖಾಸಗಿಯಾಗಿ ಕನ್ಸಲ್ಟಂಟ್ ರೀತಿ ಕಂಪನಿ ಆರಂಭಿಸಬಹುದು.
ಬಿಎಸ್‌ಸಿ ಇನ್ ಬಯೋ ಕೆಮಿಸ್ಟ್ರಿ ಕೋರ್ಸ್‌ಗೆ ಸುಮಾರು ಒಂದುವರೆ ಲಕ್ಷ ರೂ ತನಕ ವೆಚ್ಚವಾಗುತ್ತದೆ. ಅಕಾಡಮಿಕ್ ರೀಸರ್ಚರ್, ಬಯೋ ಮೆಡಿಕಲ್ ವಿಜ್ಞಾನಿ, ಕ್ಲಿನಿಕಲ್ ರೀಸರ್ಚ್ ಅಸೋಸಿಯಟ್, ಕಾಸ್ಕೆಟಿಕೆ ಸೈನ್ಸ್‌ಸಿಟ್, ಮಡಿಕಲ್ ಟೆಕ್ನಾಲಜಿಸ್ಟ್, ವಾಟರ್ ಕ್ವಾಲಿಟಿ ಟೆಕ್ನಾಲಜಿಸ್ಟ್ ಹುದ್ದೆಗಳಿಗೆ ಅಪಾರ ಬೇಡಿಕೆ ಇದೆ. ಸರ್ಕಾರಿ ಹಾಗೂ ಖಾಸಗಿ ವಲಯದಲ್ಲೂ ಈ ಪದವಿ ಪಡೆದವರಿಗೆ ಉದ್ಯೋಗಾವಕಾಶ ಲಭ್ಯವಿರಲಿದೆ.
ಮೂರ ರಿಂದ ನಾಲ್ಕು ವರ್ಷದ ಬಿಎಸ್‌ಸಿ ಇನ್ ನಸಿರ್ಂಗ್ ಕೋರ್ಸ್‌ಗೆ ಒಂದುವರೆ ಲಕ್ಷ ದಿಂದ ಎರಡು ಲಕ್ಷ ತನಕ ವೆಚ್ಚವಾಗುತ್ತದೆ. ಆರಂಭದಲ್ಲಿ 25 ರಿಂದ 30 ಸಾವಿರ ವೇತನ
ದೊರಕಲಿದ್ದು, ಇದರಲ್ಲಿ ಸರ್ಕಾರಿ ಹಾಗೂ ಖಾಸಗಿ ವಲಯದಲ್ಲಿ ಅಪಾರ ಉದ್ಯೋಗಾವಕಾಶವಿದೆ. ವಿದೇಶಗಳಲ್ಲೂ ಆಕರ್ಷಕ ವೇತನದ ಹೇರಳವಾದ ಉದ್ಯೋಗಾವಕಾಶವಿದೆ.
ಬಿಎಸ್‌ಸಿ ಇನ್ ಎಲೆಕ್ಟ್ರಾನಿಕ್ಸ್‌ನ 3 ವರ್ಷದ ಕೋರ್ಸ್. ಒಂದುವರೆ ಲಕ್ಷ ರೂಪಾಯಿ ತನಕ ವೆಚ್ಚವಾಗುತ್ತದೆ. ಸರ್ಕಾರಿ ಮತ್ತು ಖಾಸಗೀ ವಲಯದಲ್ಲಿ విలనో ఇంజినియరా, ఎలక్ట్రానికో ಸೇಲ್ಸ್ ಮ್ಯಾನೇಜರ್, ಎಲೆಕ್ಟ್ರಾನಿಕ್ಸ್ ಎಂಡ್ ಕಮ್ಯೂನಿಕೇಷನ್ ಕನ್ಸಲ್ಟಂಟ್, ఎంజనియరో ఆగి కెలన ಮಾಡಬಹುದು. ಬ್ರಾಡ್ ಕಾಸ್ಟ್ ಎಂಡ್ ಸೌಂಡ್
ಮೂರು ವರ್ಷದ ಬಿಎಸ್ ಸಿ ಇನ್ ಮಲ್ಟಿಮೀಡಿಯಾ ಕೋರ್ಸ್‌ನಲ್ಲಿ ಅನಿಮೇಷನ್ ವಿಷಯವೂ ಇದ್ದು, ಕೋರ್ಸ್‌ಗೆ ಎರಡು ಲಕ್ಷ ರೂ ತನಕ ವೆಚ್ಚವಾಗುತ್ತದೆ. ಈ ವಿಷಯದಲ್ಲಿ ಪದವಿ ಮಾಡಿದವರಿಗೆ ವಿದ್ಯುನ್ಮಾನ ಮಾಧ್ಯಮಗಳಲ್ಲಿ ತುಂಬಾ ಅವಕಾಶಗಳಿರುತ್ತದೆ. ಹಾಗೆಯೇ ಸಿನೆಮಾ ಕ್ಷೇತ್ರದಲ್ಲಿ, ಸಿನೆಮಾ ಪ್ರೋಡಕ್ಷನ್‌ಹೌಸ್‌ಗಳಲ್ಲಿ ಹಾಗೂ ಜಾಹಿರಾತು ಕಂಪನಿಗಳಲ್ಲಿ ಹೆಚ್ಚಿನ ಉದ್ಯೋಗಾವಕಾಶ ಲಭ್ಯವಿದೆ.
ಬಿಎಸ್ ಸಿ ಇನ್ ಎರೋನಾಟಿಕಲ್ ಸೈನ್ಸ್ ಕೋರ್ಸ್ ಮಾಡಲು ಎರಡರಿಂದ ನಾಲ್ಕು ಲಕ್ಷ ರೂ ವೆಚ್ಚವಾಗುತ್ತದೆ. ಈ ಕೋರ್ಸ್ ಮಾಡಿದರೆ ಫೈಟ್ ಇನ್ಸ್‌ಪೆಕ್ಟರ್, ಎರ್ ಲೈನ್ ಡೈರೆಕ್ಟರ್, ಟೆಕ್ನಿಕಲ್ ಸ್ಪೇಷಲಿಸ್ಟ್, ಮ್ಯಾನೇಜಮೆಂಟ್ ಟ್ರೇನಿ. ಫೈಟ್ ಎಂಜಿನಿಯರ್, ಡಿಸ್ಪಾಚ್ ಆಪರೇಟರ್ ಆಗಿ ಕೆಲಸ ಮಾಡಲು ಅವಕಾಶವಿದೆಯಲ್ಲದೆ ಆಕರ್ಷಕ ವೇತನವನ್ನು ಪಡೆಯಬಹುದು.
ಬಿಎಸ್ ಸಿ ಇನ್ ಜಿಯೋಲಜಿ ವಿಷಯದಲ್ಲಿ ಪದವಿ ಪಡೆದವರು ಪ್ರಾಣಿ ಸಂಗ್ರಹಾಲಯದಲ್ಲಿ ಕೆಲಸ ಮಾಡಲು ಅವಕಾಶವಿರುತ್ತದೆ. ಇಲ್ಲಿ ಜಿಯೋಲಜಿ ಪ್ಯಾಕಲ್ಟಿ ಮೆಂಬರ್, ವೈಲ್ಡ್ ಲೈಫ್ ಬಯೋಲಜಿಸ್ಟ್, ರಿಸರ್ಚರ್ ಹಾಗೂ ರಿಸರ್ಚ್ ಅಸೋಸಿಯೇಟ್ ಆಗಿ ಕೆಲಸ ಮಾಡಬಹುದು.
ಬಿಎಸ್ ಸಿ ವೇಟರ್ನರಿ ಸೈನ್‌ ಐದುವರೆ ವರ್ಷದ ಕೋರ್ಸ್‌ಗೆ ಎರಡರಿಂದ ಆರು ಲಕ್ಷ ರೂ ತನಕ ವೆಚ್ಚವಾಗುತ್ತದೆ. ಈ ಪದವಿ ಪಡೆದವರು ಸರ್ಕಾರಿ ಹಾಗೂ ಖಾಸಗಿ ವಲಯಗಳಲ್ಲಿ ವೆಟರ್ನರಿ ಸರ್ಜನ್, ಆನಿಮಲ್ ಕೇರ್ ಸ್ಪೇಷಲಿಸ್ಟ್, ವೆಟರ್ನರಿ ಆಫೀಸರ್, ಅನಿಮಲ್ ಬೀಡರ್, ಅನಿಮಲ್ ರಿಸರ್ಚರ್ ಆಗಿ ಕೆಲಸ ಮಾಡಬಹುದು.
ಬಿಎಸ್ ಸಿ ಇನ್ ನ್ಯೂಟೀಶಿಯನ್ ಎಂಡ್ ಡಯಟ್‌ನ ಮೂರು ವರ್ಷದ ಕೋರ್ಸ್‌ಗೆ 50 ರಿಂದ ಎರಡುವರೆ ಲಕ್ಷ ರೂ ತನಕ ವೆಚ್ಚವಾಗಲಿದೆ. ಸರ್ಕಾರಿ ಮತ್ತು ಖಾಸಗೀ ಆಸ್ಪತ್ರೆಗಳಲ್ಲಿ ಇವರಿಗೆ ಹೆಚ್ಚಿನ ಉದ್ಯೋಗಾವಕಾಶ ಇರಲಿದೆ. ಕೆಲಸಕ್ಕೆ ಸೇರಲು ಇಷ್ಟ ಇಲ್ಲದಿದ್ದರೆ ಸ್ವಂತ ಕ್ಲಿನಿಕ್ ಆರಂಭಿಸಿ ಡೈಟೀಷಿಯನ್ ಕನ್ಸಲ್ಟಂಟ್ ಆಗಿ ಸೇವೆ ಸಲ್ಲಿಸಬಹುದು.
ಬಿಎಸ್ ಸಿ ಇನ್ ಸೈಕಾಲಜಿ ಕೋರ್ಸ್‌ಗೆ 50 ರಿಂದ 3 ಲಕ್ಷ ತನಕ ವೆಚ್ಚವಾಗಲಿದೆ. ಇವರಿಗೆ ಪೊಲೀಸ್ ಇಲಾಖೆ, ವೈದ್ಯಕೀಯ ಕ್ಷೇತ್ರದಲ್ಲೂ ಗಾವಕಾಶ ದೊರಕಲಿದೆ. ಉದ್ಯೋಗಾವಕಾಶ
ಬಿಎಸ್ ಸಿ ಇನ್ ಇನ್ಸಾರ್ಮೇಶನ್ ಟೆಕ್ನಾಲಜಿ ಕೋರ್ಸ್‌ಗೆ 90 ಸಾವಿರ ದಿಂದ ಎರಡುವರೆ ಲಕ್ಷ ರೂ ತನಕ ವೆಚ್ಚವಾಗುತ್ತದೆ. ಐಟಿ ಸ್ಪೇಷಲಿಸ್ಟ್, ಟೆಕ್ನಿಕಲ್ ಕನ್ಸಲ್ಟಂಟ್, ಸಿಸ್ಟಮ್ ಎನಾಲಿಸ್ಟ್, ಪ್ರೋಗ್ರಾಮರ್, ಕ್ವಾಲಿಟಿ ಅನಾಲಿಸ್ಟ್, ನೆಟ್ ವರ್ಕ್ ಅನಾಲಿಸ್ಟ್, ಸಾಫ್ಟ್‌ವೇರ್ ಟೆಸ್ಟರ್ ಆಗಿ ಕಾರ್ಯನಿರ್ವಹಿಸಬಹುದು.
ಹೀಗೆ ಕೇವಲ ವಿಜ್ಞಾನ ವಿಷಯದಲ್ಲಿ ಪಿಯುಸಿ ಮುಗಿಸಿದವರಿಗೆ ದೇಶ ವಿದೇಶಗಳಲ್ಲಿ ಉತ್ತಮ ಉದ್ಯೋಗಾವಕಾಶ ಹಾಗೂ ಕೈತುಂಬ ವೇತನ ಸಿಗುವ ಹಲವಾರು ಕೋರ್ಸಗಳಿವೆ, ವಿದ್ಯಾರ್ಥಿಗಳು ತಮಗಿಷ್ಟದ ವಿಷಯವನ್ನು ಆರಿಸಿಕೊಂಡು ಅದರಲ್ಲಿ ಪ್ರಾವೀಣ್ಯತೆಯನ್ನು ಹೊಂದುವ ಮೂಲಕ ತಮ್ಮ ವೃತ್ತಿ ಬದುಕನ್ನು ಆಯ್ಕೆ ಮಾಡಿಕೊಳ್ಳಬಹುದು.

LEAVE A REPLY

Please enter your comment!
Please enter your name here

Related Articles

TRENDING ARTICLES