July 21, 2025 9:06 pm

ಯಾದಗಿರಿ ಜಿಲ್ಲಾ ಪ್ರವಾಸಿ ತಾಣಗಳು

ಅನೇಕ ಪ್ರಾಕೃತಿಕ ವಿಸ್ಮಯಗಳನ್ನು ತನ್ನ ಒಡಲಲ್ಲಿಟ್ಟುಕೊಂಡ ಯಾದಗಿರಿ ಜಿಲ್ಲೆ ಕರ್ನಾಟಕ ರಾಜ್ಯದ ತುತ್ತ ತುದಿಯಲ್ಲಿರುವ ಜಿಲ್ಲೆ. ಬಿಸಿಲು ಮತ್ತು ಹಸಿರನ್ನು ಸಮಾನವಾಗಿ ಪಡೆದುಕೊಂಡ ಯಾದಗಿರಿ ಜಿಲ್ಲೆಗೆ ಬೆಟ್ಟಗುಡ್ಡಗಳ ರಕ್ಷಣಾ ಕವಚವೂ ಉಂಟು.
ರಾಷ್ಟ್ರಕೂಟರು, ಯಾದವರು, ಕಲ್ಯಾಣದ ಚಾಲುಕ್ಯರು ಹೈದ್ರಾಬಾದ್ ನಿಜಾಮರು, ಸುರಪುರದ ದೊರೆಗಳೂ ಐತಿಹಾಸಿಕ ಮತ್ತು ಪರಿಸರ ತಾಣಗಳಿಗೆ ಹೆಸರು ವಾಸಿ.
ಯಾದವ ರಾಜವಂಶದವರು ಆಳ್ವಿಕೆ
ನಡೆಸಿದ ಈ ಭಾಗಕ್ಕೆ ಯಾದಗಿರಿ ಎಂಬ ಹೆಸರು ಬಂದಿತೆಂಬುದು ಒಂದು ಅಭಿಪ್ರಾಯವಾದರೆ, ಜಿಲ್ಲಾ ಕೇಂದ್ರ ಯಾದಗಿರಿ ಪಟ್ಟಣದ ಬೆಟ್ಟದಲ್ಲಿರುವ ಐತ (ಎತ್ತಿನ ಆಕಾರ) ಗಿರಿಯೇ ಯಾದಗಿರಿ ಆಯಿತೆಂದು ಇನ್ನೊಂದು ಅಭಿಮತ.
ಕೃಷ್ಣಾನದಿಗೆ ಅಡ್ಡಲಾಗಿ ಕಟ್ಟಿರುವ ಜಲಾಶಯ ಯಾದಗಿರಿ ಜಿಲ್ಲೆಯನ್ನು ಮನ ಮೋಹಕ ಜಿಲ್ಲೆಯಾಗಿಸಲು ನೀಡಿರುವ ಕೊಡುಗೆ ಅಪಾರ, ಜಲಾಶಯ ತುಂಬಿ ಹರಿಯುವ ಹಿನ್ನೆಲೆಯಲ್ಲಿ ಚಿತ್ತಾಕರ್ಷಕ ತಾಣಗಳಿಗೆ ಕಾರಣವಾಗಿದ್ದು ನೋಡುಗರಿಗೆ ವಿಶಿಷ್ಟ ನಾರಾಯಣಪುರ (ಬಸವ ಸಾಗರ)
ಅನುಭವವನ್ನು ಕೊಡ ಮಾಡುತ್ತದೆ.
ಮಳೆಗಾಲದಲ್ಲಿ ಕಾಣಸಿಗುವ ಜಲಪಾತಗಳ ಸೊಗಸು, ಚಾರಿತ್ರಿಕ ಸ್ಮಾರಕಗಳು, ಹಲವು ಧಾರ್ಮಿಕ ಕ್ಷೇತ್ರಗಳು, ಪಕ್ಷಿಧಾಮ ಚಾರಿತ್ರಿಕ ಮತ್ತು ಧಾರ್ಮಿಕ ವ್ಯಕ್ತಿಗಳ ತಾಣಗಳಿಂದಾಗಿ ವಿಫುಲ ಪ್ರವಾಸಿ ಸಾಧ್ಯತೆಗಳಿರುವ ಜಿಲ್ಲೆ ಯಾದಗಿರಿ.

ಯಾದಗಿರಿ ಜಿಲ್ಲೆಯ ಹೆದ್ದಾರಿಗಳಲ್ಲಿ ಸಾಗುವಾಗ ಸಿಗುವ ಬೆಟ್ಟಗಳ ಸಾಲು ನೋಡುಗರನ್ನು ತಕ್ಷಣ ಸೆಳೆಯುವುದರಲ್ಲಿ ಹಿಂದೆ ಬೀಳುವುದಿಲ್ಲ. ಕಲ್ಲು ಮಣ್ಣಿನಿಂದ ಕಟ್ಟಲಾದ ಹಲವು ಕೋಟೆಗಳು ಪ್ರಕೃತಿ ನಿರ್ಮಿತ ಆಕೃತಿಗಳ ಮಡಿಲು.
ಕರ್ನಾಟಕದ ಮಲೆನಾಡಿನ ಹಲವು ಕೆರೆಕುಂಟೆಗಳು ವಲಸೆ ಹಕ್ಕಿಗಳಿಗೆ ಆಶ್ರಯ ತಾಣಗಳಾಗಿರುವಂತೆ ಉತ್ತರ ಕರ್ನಾಟಕದ ನೀರು ತಾಣಗಳು ಹಕ್ಕಿಗಳ ಸಂತಾನ ಉತ್ಪತ್ತಿಗೆ ನೆರವಾಗುತ್ತ ಬಂದಿವೆ. ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ಬೆಳೆನಾಳ ಗಮನ ಸೆಳೆದಿರುವ ಪಕ್ಷಿಧಾಮ, ಗುರುಮರಕಲ್ ಪಟ್ಟಣದ ಸಮೀಪದಲ್ಲಿರುವ ಜಲಪಾತ ಒಂದು ಪ್ರಾಕೃತಿಕ ವಿಸ್ಮಯ.

ಒಂದು ಬಾಗಿಲು ತೆರೆದರೆ ಬಂಗಲೆಯ ಎಲ್ಲಾ 8 ಬಾಗಿಲುಗಳು ತೆರೆದುಕೊಂಡು ಅಚ್ಚರಿ ಹುಟ್ಟಿಸುವ ಒಂದು ಬಾಗಿಲು ಬಂದ್ ಮಾಡಿದರೆ ಎಲ್ಲಾ ಎಂಟು ಬಾಗಿಲು ಮುಚ್ಚಿಕೊಳ್ಳುವ ವಿಸ್ಮಯ ತಂತ್ರಜ್ಞಾನ ಇರುವ ಮನೆಯೊಂದು ಯಾದಗಿರಿ ಜಿಲ್ಲೆಯ ಆಕರ್ಷಣೆಗಳಲ್ಲೊಂದು. ಸುರಪುರ ಸಂಸ್ಥಾನದ ಕಮಿಷನರ್ ಆಗಿದ್ದ ಮೆಡೋಸ್ ಟೇಲರ್ ಕಟ್ಟಿಸಿರುವ ಭವ್ಯ ಭವನ ಇರುವುದು ಚಾರಿತ್ರಿಕ ತಾಣವಾದ ಸುರಪುರದಲ್ಲಿ.
ಬೆಟ್ಟಗುಡ್ಡಗಳ ವಿಶೇಷ ಆಕರ್ಷಣೆ ಹೊಂದಿರುವ ಯಾದಗಿರಿ ಜಿಲ್ಲೆಯ ಬೆಟ್ಟವೊಂದು ಗೌತಮ ಬುದ್ಧ ಮಲಗಿರುವಂತೆ ಕಾಣುವುದೊಂದು ವಿಶೇಷ, ಶಹಾಪುರದಿಂದ ಗುಲ್ಬರ್ಗಾಕ್ಕೆ ಹೋಗುವ ಹೆದ್ದಾರಿ ಪಕ್ಕದಲ್ಲಿ ಮಲಗಿರುವ ಬುದ್ಧ ಬೆಟ್ಟ ತಾಣ ಸಿಗುವುದು.
ಬೆಟ್ಟ ಗುಡ್ಡಗಳ ಶಿಲಾಶ್ರಯದಲ್ಲಿ ಆದಿ ಮಾನವ ಬಿಡಿಸಿದ ಚಿತ್ರಕಲೆ ಜಿಲ್ಲೆಯ ಪ್ರಾಚೀನ ಆಸ್ತಿ. ಹತ್ತಿಕುಣೆ, ಯರಗೋಳ, ಸೈದಾಗರ ಆಜುಬಾಜಿನ ಬೆಟ್ಟಗಳ ಶಿಲಾಶ್ರಯಗಳ ಮಾನವ ರೇಖಾ ಚಿತ್ರಗಳಿಗೆ ತಾವು ಮಾಡಿಕೊಟ್ಟಿವೆ.
ಯಾದಗಿರಿಯ ಜಿನ್ನಪ್ಪನ ಬೆಟ್ಟದಲ್ಲಿರುವ ಪಾಶ್ವನಾಥ ತೀಥರ್ಂಕರರ ಉಬ್ಬುಶಿಲ್ಪ, ಗುಹಾಂತರ ಬಸದಿಯಲ್ಲಿರುವ ತೀಥರ್ಂಕರ ಶಿಲ್ಪಗಳು ಇಲ್ಲಿ ಜೈನ ಧರ್ಮದ ಹೆಜ್ಜೆಗುರುತುಗಳು
ಸೂಚಿಸಿದರೆ, ಯಾದಗಿರಿ ಬೆಟ್ಟದ ಮೇಲಿರುವ ಮೂರು ಸುತ್ತಿನ ಕೋಟೆ, ರಾಮಲಿಂಗೇಶ್ವರ ಆಲಯ, ಅದರ ಬದಿಗಿರುವ ಅಕ್ಕತಂಗಿಯರ ಭಾವಿ, ಯುದ್ಧೋಪಕರಣಗಳಿರುವ ಹಳೆಯ ಕೋಟಿ ಪ್ರವಾಸೋದ್ಯಮಕ್ಕೆ ಹಲವು ತಾಣಗಳನ್ನು ಕೊಡ ಮಾಡುತ್ತವೆ. ఆదిలో కాలద
ಸುರಪುರದ ಗೋಪಾಲಸ್ವಾಮಿ ದೇವಾಲಯದಲ್ಲಿ ಮೋಹಕ ಶಿಲ್ಪಗಳು. ಯಾದಗಿರಿ ತಾಲೂಕಿನ ಮೈಲಾಪುರದ ಮೈಲಾರ ಲಿಂಗೇಶ್ವರ ದೇವಸ್ಥಾನ. ಮೋಟ್ನಳ್ಳಿಯ ಧಾರ್ಮಿಕ ಕೇಂದ್ರಗಳು ಆನೇಕ ಬಗೆ ಶಿಲ್ಪ ಸೌಂದರ್ಯವನ್ನು ಪರಿಚಯಿಸುತ್ತವೆ.
ಯಾದಗಿರಿ ಜಿಲ್ಲೆಯಾದ್ಯಂತ ಹರಡಿರುವ ಅನೇಕ ಮಠಗಳು ಆಸ್ತಿಕರಿಗೆ ಅಧ್ಯಾತ್ಮದ ಪರಿಚಯ ಮಾಡಿಸುವುದರ ಜೊತೆಗೆ ವಿವಿಧ ಕಟ್ಟಡ ವಿಶೇಷಗಳನ್ನು ಅನಾವರಣಗೊಳಿಸುತ್ತವೆ. ಹಿಂದೂ ಮುಸ್ಲಿಂ ಭಾವೈಕ್ಯ ಸಾರುವ ತಿಂಥಿಣಿ
ಎಲ್ಲ ಧರ್ಮದವರನ್ನು ಸೆಳೆಯುವ ಸ್ಥಳ.
ಇಲ್ಲಿರುವುದು ಸಂತ ಮೌನಪ್ಪಯ್ಯನ ಗದ್ದುಗೆ.
ಸುರಪುರ ಕೋಟೆ, ಶಹಾಪುರದ ಸಗರ ಕೋಟೆ. ಯಾದಗಿರಿ ಬೆಟ್ಟದ ಮೂರು ಸುತ್ತಿನ ಕೋಟೆ. ಗುರುಮಿಠಕಲ್ ಹತ್ತಿರದ ಮಣ್ಣಿನ ಕೋಟೆ. ಕಲ್ಯಾಣ ಚಾಲುಕ್ಯರ ಆಡಳಿತ ಕಾಲದಲ್ಲಿ ಉಪ ರಾಜಧಾನಿಯಾಗಿದ್ದ ಉಜ್ಜಿಲೆ, ಆನಪುರ, ಎವೂರು. ಈದ್ದೂರು, ಶಿರವಾಳ, ಸಗರ ಹಲವಾರು ಶಿಲಾಶಾಸನಗಳು, ಗುಡಿಗೋಪುರಗಳು, ಯಾದಗಿರಿಯ ಚಾರಿತ್ರಿಕ ಇತಿಹಾಸಕ್ಕೆ ಸಾಕ್ಷಿಯಾಗಿವೆ.
ಕಪ್ಪುಮಣ್ಣಿನ ಭೂಮಿ ಇದ್ದು ಭೀಮಾನದಿಯ ಎಡದಂಡೆಯುದ್ದಕ್ಕೂ ವ್ಯವಸಾಯಕ್ಕೆ ನೀರಿನಾಶ್ರಯ ಬದಿಗಿರುವ ಯಾದಗಿರಿ ಜಿಲ್ಲೆ ಕೃಷ್ಣಾ ಹಾಗೂ ಭೀಮಾ ನದಿಗಳಿಂದಾಗಿ ವ್ಯವಸಾಯ ಸಮೃದ್ಧವಾಗಿದ್ದು, ಕರ್ನಾಟಕದ 30ನೇ ಜಿಲ್ಲೆಯಾಗಿ ಹೊರಹೊಮ್ಮಿದ್ದು ಕಲೆ. ಸಾಹಿತ್ಯ ಸಂಸ್ಕೃತಿಗೆ ಕೊಡುಗೆ ಕೊಟ್ಟಿದ್ದು ಪ್ರವಾಸೋದ್ಯಮ ದೃಷ್ಟಿಯಿಂದಲೂ ಮಹತ್ವ ಪಡೆದುಕೊಂಡಿದೆ.
ಕಾಲಜ್ಞಾನ ರಚಿಸಿದ ಕೊಡೇಕಲ್ ಬಸವಣ್ಣ, ಕವಿ ಲಕ್ಷ್ಮೀಶ ಸೇರಿದಂತೆ ಹಲವು ಕವಿ ಸಾಹಿತಿಗಳ ತವರು ಯಾದಗಿರಿ. ಶ್ರಿಮಂತ ಜಾನಪದ ಪರಂಪರೆ ಹೊಂದಿರುವ ಯಾದಗಿರಿ ವಿಷ ಜಂತು ಚೇಳುಗಳ ಆರಾಧನಾ ತಾಣವನ್ನೂ ಇಟ್ಟುಕೊಂಡು ಪ್ರತಿವರ್ಷ ಕಂದಕೂರಿನ ಚೇಳುಗಳ ಜಾತ್ರೆಯನ್ನು ನಡೆಸುವ ಸ್ಥಳ.

LEAVE A REPLY

Please enter your comment!
Please enter your name here

Related Articles

TRENDING ARTICLES