ಎಸ್.ಸಿ.ಎಸ್.ಪಿ/ಟಿ.ಎಸ್.ಪಿ ಯೋಜನೆಗಳು
ಸಮಾಜ ಕಲ್ಯಾಣ ಇಲಾಖೆಯು ವಿವಿಧ ಇಲಾಖೆಗಳಲ್ಲಿನ ಎಸ್.ಸಿ.ಎಸ್.ಪಿ/ಟಿ.ಎಸ್.ಪಿ ಯ 53 ಯೋಜನೆಗಳ ಮೌಲ್ಯಮಾಪನ ಮತ್ತು ಸಾಮಾಜಿಕ ಪರಿಶೋಧನೆ ಕೈಗೊಂಡಿದ್ದು, ಅದರಲ್ಲಿ 31 ಯೋಜನೆಗಳು ಯಶಸ್ವಿಯಾಗಿ ಪೂರ್ಣಗೊಂಡಿದ್ದು, 22 ಯೋಜನೆಗಳು ಪ್ರಗತಿಯಲ್ಲಿದೆ ಎಂಬ ಅಂಶ ತಿಳಿದು ಬಂದಿದೆ.
ವಿವಿಧ ಇಲಾಖೆಗಳಲ್ಲಿ ಹಮ್ಮಿಕೊಳ್ಳಲಾಗಿರುವ ಎಸ್.ಸಿ.ಎಸ್.ಪಿ/ಟಿ.ಎಸ್.ಪಿ ಯೋಜನೆಗಳ ಮೌಲ್ಯಮಾಪನದಿಂದ ತಿಳಿದು ಬಂದಿರುವ ಪ್ರಮುಖ ಅಂಶಗಳು ಕೆಳಕಂಡಂತಿದೆ.
ಕೃಷಿ ಹಿಡುವಳಿ :
2010 ರ ಕೃಷಿ ಗಣತಿಯಲ್ಲಿ 10.74 ಲಕ್ಷ ಹೆಕ್ಟೇರ್ ಇದ್ದ ಪರಿಶಿಷ್ಟ ಜಾತಿಯವರ ಭೂ ಹಿಡುವಳಿಯು 2015 ರ ಕೃಷಿ ಗಣತಿಯಲ್ಲಿ 11.08 ಹೆಕ್ಟೇರ್‌ಗಳಿಗೆ ಏರಿಕೆಯಾಗಿದೆ. ಅದೇ ರೀತಿ ಪರಿಶಿಷ್ಟ ಪಂಗಡದವರ ಭೂ ಹಿಡುವಳಿ 7.05 ಲಕ್ಷ ಹೆಕ್ಟೇರ್‌ಗಳಿಂದ 7.30 ಲಕ್ಷ ಹೆಕ್ಟೇರ್‌ಗಳಿಗೆ ಏರಿಕೆಯಾಗಿರುತ್ತದೆ.
ಶಿಕ್ಷಣ :
ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ. ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣದಲ್ಲಿ ಜಿಇಆರ್ ಪ್ರಮಾಣ ಏರಿಕೆಯಾಗಿದ್ದು, ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಮತ್ತು ಇತರರ ನಡುವೆ ಯಾವುದೇ ಅಂತರ ಇರುವುದು ಕಂಡುಬಂದಿಲ್ಲ. ಅಲ್ಲದೆ ವಿದ್ಯಾರ್ಥಿ ವೇತನ. ವಿದ್ಯಾರ್ಥಿ ನಿಲಯಗಳ ಸೌಲಭ್ಯಗಳಿಂದಾಗಿ ಉನ್ನತ ಶಿಕ್ಷಣ ಪಡೆಯುತ್ತಿರುವ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿರುತ್ತದೆ ಹಾಗೂ ಇದರಲ್ಲಿ ಲಿಂಗ ತಾರತಮ್ಯವು ಕಡಿಮೆಯಾಗಿರುತ್ತದೆ.
ಇನ್ನು ಪ್ರಾಥಮಿಕ ಶಿಕ್ಷಣ ಮತ್ತು ಉನ್ನತ ಶಿಕ್ಷಣದಲ್ಲಿ ವಿದ್ಯಾರ್ಥಿಗಳ ದಾಖಲಾತಿ ಪ್ರಮಾಣ ಏರಿಕೆ ಕಂಡಿದೆ.
ಕೃಷಿ ಹೊಂಡ :
ಕೃಷಿ ಹೊಂಡ ಯೋಜನೆಯಿಂದ ರೈತರಿಗೆ ಹೆಚ್ಚಿನ ಬೆಳೆ ಬೆಳೆಯಲು ಸಾಧ್ಯವಾಗಿದ್ದು, ಇದರಿಂದಾಗಿ ರೈತರ ವಾರ್ಷಿಕ ಆದಾಯವು ಸರಾಸರಿ ರೂ 11.155/-ರಷ್ಟು ಹೆಚ್ಚಳವಾಗಿರುತ್ತದೆ.
ಕೃಷಿ ಉಪಕರಣ :
ರೈತರಿಗೆ ಕೃಷಿ ಉಪಕರಣಗಳಿಂದಾಗಿ ಕೂಲಿಗೆ ನೀಡುವ ಮೊತ್ತ ಉಳಿತಾಯವಾಗಿದ್ದು, ವಾರ್ಷಿಕ ಸರಾಸರಿ ರೂ. 15,584/- ರಷ್ಟು ಉಳಿತಾಯ ಮಾಡಿರುತ್ತಾರೆ. ಅಲ್ಲದೆ ಇದರಿಂದಾಗಿ ಶೇ 76 ರಷ್ಟು ರೈತರ ಕೃಷಿ ಇಳುವರಿ ಹೆಚ್ಚಾಗಿರುತ್ತದೆ.
m:
ಈ ಯೋಜನೆಯಿಂದ ರೈತರಿಗೆ ಹೆಚ್ಚಿನ ಸಹಾಯವಾಗಿದ್ದು, ಜೀವನಮಟ್ಟ ಸುಧಾರಿಸಲು ಸಾಧ್ಯವಾಗಿರುತ್ತದೆ.
ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನ :
ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನ ಕಾರ್ಯಕ್ರಮದಡಿ 94.50% ಫಲಾನುಭವಿಗಳು ತಮ್ಮ ಖಾತೆಗೆ ಸಮರ್ಪಕವಾಗಿ ಹಣ ಜಮೆಯಾಗುತ್ತಿರುವ ಬಗ್ಗೆ ತೃಪ್ತಿ ವ್ಯಕ್ತ ಪಡಿಸಿದ್ದಾರೆ.
ನರೇಗಾ ಯೋಜನೆಯಡಿ ಅರ್ಜಿ ಹಾಕಿರುವ 74% ಜನರಿಗೆ 15 ದಿನಗಳೊಳಗೆ ಉದ್ಯೋಗ ದೊರೆತಿರುವುದಲ್ಲದೆ, ಶೇಕಡ 100 ರಷ್ಟು ಜನರಿಗೆ ಅವರ ಉದ್ಯೋಗದ ಕೂಲಿಯನ್ನು ಬ್ಯಾಂಕ್ ಖಾತೆಗೆ ನೇರವಾಗಿ ಜಮೆ ಮಾಡಲಾಗಿದೆ.
ನೀರಾವರಿ :
ನೀರಾವರಿ ಯೋಜನೆಯಡಿ 91 ಜನರಿಗೆ ವೈಯಕ್ತಿಕ ನೀರಾವರಿ ಕಾಮಗಾರಿಯಿಂದ ನಿರಂತರ ನೀರಿನ ಸೌಲಭ್ಯ ದೊರಕಿದ್ದು, 89% ಜನರು ವಿವಿಧ ಬೆಳೆಗಳನ್ನು ಬೆಳೆಯಲು ಸಹಾಯವಾಗಿದೆ.
ನೀರಾವರಿ ಕಾಮಗಾರಿ :
ನೀರಾವರಿ ಕಾಮಗಾರಿ ಯೋಜನೆಯಿಂದ ಕೃಷಿ ಭೂಮಿ ವಿಸ್ತರಣೆಯಾಗಿರುವುದಲ್ಲದೆ, ಉತ್ಪಾದನೆ ಹೆಚ್ಚಳ, ಬಹು ಬೆಳೆ ಮತ್ತು ವಾಣಿಜ್ಯ ಬೆಳೆ. ನೀರಾವರಿ ಭೂಮಿಯ ವಿಸ್ತರಣೆ ಆಗಿದೆ.
ಕೈಗಾರಿಕಾ ನಿವೇಶನಗಳ ಹಂಚಿಕೆ :
ಕೈಗಾರಿಕಾ ನಿವೇಶನಗಳ ಹಂಚಿಕೆಗೆ ನೀಡುವ ಸಹಾಯಧನ ಕಾರ್ಯಕ್ರಮದಡಿಯಲ್ಲಿ 91 ಉದ್ದಿಮೆಗಳಲ್ಲಿ 1,470 ಉದ್ಯೋಗ ជូដ, 2.2-497 (35%) 2.3-198 (13%) ಜನರಿಗೆ ಉದ್ಯೋಗ ದೊರೆತಿರುತ್ತದೆ. ಉದ್ದಿಮೆಗಳ ಸರಾಸರಿ ವಾರ್ಷಿಕ ವಹಿವಾಟು ರೂ 76 ಲಕ್ಷ ಇದ್ದು, ಇದು ರೂ. 2 ಲಕ್ಷದಿಂದ ರೂ. 6 ಕೋಟಿಯವರೆಗೆ ಆಗಿದೆ.
ಸಮೃದ್ಧಿ :
ಈ ಯೋಜನೆಯಡಿ ಫಲಾನುಭವಿಗಳು ಮಾಸಿಕ ರೂ 10.450/- ಗಳಷ್ಟು ಲಾಭಗಳಿಸಿದ್ದಾರೆ ಎಂಬುದು ಹಾಗೂ ಸ್ವಸಹಾಯ ಸಂಘಗಳ ಕಿರು ಸಾಲ ಯೋಜನೆಯಿಂದ ಶೇ 80 ರಷ್ಟು ಫಲಾನುಭವಿಗಳಿಗೆ ಆರ್ಥಿಕವಾಗಿ ಸಹಾಯವಾಗಿದೆ ಎಂಬುದು ಮೌಲ್ಯಮಾಪನದಿಂದ ತಿಳಿದು ಬಂದಿದೆ.
ಹಾಸ್ಟೆಲ್ ಪ್ರವೇಶ :
ಹಾಸ್ಟೆಲ್‌ನಲ್ಲಿ ನೆಲೆಸಿರುವ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಪ್ರಯಾಣದ ತೊಂದರೆ ಇಲ್ಲದೇ ಇರುವ ಕಾರಣ ಮತ್ತು ಗುಂಪು ಅಧ್ಯಯನಕ್ಕೆ ಅವಕಾಶ ಇರುವ ಕಾರಣ, ಉತ್ತಮ ಅಂಕಗಳನ್ನು ಗಳನ್ನು ಗಳಿಸಲು ಸಾಧ್ಯವಾಗುತ್ತಿದೆ.
ವಿದ್ಯಾರ್ಥಿ ವೇತನ :
ವಿದ್ಯಾರ್ಥಿ ವೇತನ ದೊರಕುತ್ತಿರುವುದರಿಂದ ವಿದ್ಯಾರ್ಥಿಗಳು ಕಲಿಕಾ ಸಾಮಗ್ರಿಗಳನ್ನು ಖರೀದಿ ಮಾಡಲು ಮತ್ತು ಉನ್ನತ ಶಿಕ್ಷಣ ಪಡೆಯಲು ಸಹಾಯವಾಗುತ್ತಿದೆ.
ಒಟ್ಟಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಜನರ ಅಭಿವೃದ್ಧಿಗಾಗಿ ಹಮ್ಮಿಕೊಳ್ಳಲಾಗುತ್ತಿರುವ ವಿವಿಧ ಯೋಜನೆಗಳು ನಿರ್ದಿಷ್ಟ ಪ್ರತಿಫಲವನ್ನು ನೀಡುತ್ತಿವೆ ಎಂಬುದು ಸಮಾಜ ಕಲ್ಯಾಣ ಇಲಾಖೆಯು ನಡೆಸಿರುವ ಮೌಲ್ಯಮಾಪನದಿಂದ ತಿಳಿದುಬಂದಿದೆ.