July 23, 2025 4:13 am

ಭಾರತದ ಹೊಸ ಕ್ರಿಮಿನಲ್ ಕಾನೂನುಗಳ ವಿಶೇಷತೆಗಳು

ಇದೇ ಜುಲೈ 1 ರಿಂದ ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ ಎಂಬ ಹೆಸರಿನ ಮೂರು ಪ್ರಮುಖ ಕ್ರಿಮಿನಲ್ ಕಾನೂನುಗಳು ದೇಶದಲ್ಲಿ ಜಾರಿಗೆ ಬಂದಿವೆ. ಇವುಗಳು ಅನುಕ್ರಮವಾಗಿ ಭಾರತೀಯ ದಂಡ ಸಂಹಿತೆ (ಐ.ಪಿ.ಸಿ), ದಂಡ ಪ್ರಕ್ರಿಯಾ ಸಂಹಿತೆ (ಕ್ರಿಮಿನಲ್ ಪ್ರೊಸೀಜರ್ ಕೋಡ್) ಮತ್ತು ಭಾರತ ಸಾಕ್ಷ್ಯ ಅಧಿನಿಯಮ (ಇಂಡಿಯನ್ ಎವಿಡೆನ್ಸ್ ಆಕ್ಟ್) ಇವುಗಳನ್ನು ಬದಲಾಯಿಸಿವೆ. ಈ ಮೂರೂ ಹೊಸ ಕಾನೂನುಗಳು ದೇಶದಲ್ಲಿ ಜಾರಿಗೆ ಬಂದಿದ್ದರೂ 2024ರ ಜೂನ್ 30ರವರೆಗೆ ದಾಖಲಾಗಿದ್ದ ಎಲ್ಲ ಪ್ರಕರಣಗಳ ತನಿಖೆ ಮತ್ತು ವಿಚಾರಣೆಗಳು ಹಳೆಯ ಕಾನೂನುಗಳ ಅನ್ವಯವೇ ಸಾಗುತ್ತವೆ. ಹೀಗಾಗಿ ಎಲ್ಲ ಹಳೆಯ ಪ್ರಕರಣಗಳೂ ಮುಕ್ತಾಯಗೊಳ್ಳುವವರೆವಿಗೆ ಹಳೆಯ ಮತ್ತು ಹೊಸ ಕಾನೂನುಗಳೆರಡೂ ಚಾಲ್ತಿಯಲ್ಲಿರುತ್ತವೆ.

ಹೊಸ ಕಾನೂನುಗಳನ್ನು ಪರಿಚಯಿಸುತ್ತಿರುವ ಮುಖ್ಯ ಕಾರಣವೆಂದರೆ ಎರಡು ಪ್ರಮುಖ ಕ್ರಿಮಿನಲ್ ಕಾನೂನುಗಳು ಒಂದೂವರೆ ಶತಮಾನದಷ್ಟು ಹಳೆಯದಾಗಿದ್ದು, ಬ್ರಿಟಿಷರು ಜಾರಿ ಮಾಡಿದವಾಗಿದ್ದರೆ ದಂಡ ಪ್ರಕ್ರಿಯಾ ಸಂಹಿತೆ 50 ವರ್ಷಗಳ ಹಿಂದೆ ಜಾರಿ ಮಾಡಲಾದ ಕಾನೂನಾಗಿತ್ತು. ಈ ಮೂರೂ ಕಾನೂನುಗಳು ಇಂದಿನ ಸಾಮಾಜಿಕ, ಆರ್ಥಿಕ ಪರಿಸ್ಥಿತಿಗೆ ಹೊಂದುತ್ತಿರಲಿಲ್ಲ ಮತ್ತು ಬದಲಾಗಿರುವ ಅಪರಾಧಗಳ ಸ್ವರೂಪ ಮತ್ತು ಅಪರಾಧಿಗಳನ್ನು ಸೂಕ್ತ ರೀತಿಯಲ್ಲಿ ಎದುರಿಸಲು ಸಮರ್ಥವಾಗಿರಲಿಲ್ಲ. ಈಗ ಜಾರಿಯಾಗಿರುವ ಕಾನೂನುಗಳನ್ನು ಅಪರಾಧ ನ್ಯಾಯ ವ್ಯವಸ್ಥೆಯು ಹೆಚ್ಚು ಜವಾಬ್ದಾರಿಯುತವಾಗಿ, ಹೆಚ್ಚು ಪಾರದರ್ಶಕವಾಗಿ ಮತ್ತು ಸಾರ್ವಜನಿಕರಿಗೆ ಸುಲಭವಾಗಿ ಲಭ್ಯವಾಗುವಂತೆ ರಚಿಸಲಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಕಾನೂನು ಜಾರಿಯಲ್ಲಿ ಆಗುತ್ತಿರುವ ವಿಳಂಬಗಳನ್ನು ತಪ್ಪಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕಾನೂನು ಜಾರಿ ವ್ಯವಸ್ಥೆಯಲ್ಲಿ ತಂತ್ರಜ್ಞಾನವನ್ನು ಹೆಚ್ಚಾಗಿ ಅಳವಡಿಸಿಕೊಳ್ಳಲಾಗಿದೆ.

ಭಾರತೀಯ ನ್ಯಾಯ ಸಂಹಿತೆ

ಭಾರತೀಯ ದಂಡ ಸಂಹಿತೆಯ (ಐ.ಪಿ.ಸಿ) ಬದಲು ಹೊಸದಾಗಿ ಬಂದಿರುವ ಕಾನೂನು ಭಾರತೀಯ ನ್ಯಾಯ ಸಂಹಿತೆ (ಬಿ.ಎನ್.ಎಸ್). ಅದರ ಹೆಸರೇ ಹೇಳುವಂತೆ ಹಳೆಯ ಕಾನೂನು ಆರೋಪಿಗೆ ದಂಡ ವಿಧಿಸುವ ಉದ್ದೇಶವನ್ನು ಹೊಂದಿದ್ದರೆ ಹೊಸ ಕಾನೂನು ಸಂತ್ರಸ್ತರಿಗೆ ನ್ಯಾಯವನ್ನು ಒದಗಿಸುವತ್ತ ಕೇಂದ್ರೀಕೃತವಾಗಿದೆ.

ಐ.ಪಿ.ಸಿ ಯಲ್ಲಿ ಒಟ್ಟು 23 ಅಧ್ಯಾಯಗಳೂ 511 ಸೆಕ್ಷನ್‌ಗಳೂ ಇದ್ದವು. ಬಿ.ಎನ್.ಎಸ್ ನಲ್ಲಿ ಅವುಗಳ ಸಂಖ್ಯೆ ಇಪ್ಪತ್ತು ಅಧ್ಯಾಯಗಳು ಮತ್ತು 358 ಸೆಕ್ಷನ್‌ಗಳಿಗೆ ಸೀಮಿತವಾಗಿದೆ. ಐ.ಪಿ.ಸಿಯಲ್ಲಿದ್ದ 175 ಸೆಕ್ಷನ್‌ ಗಳನ್ನು ಮಾರ್ಪಾಡು ಮಾಡಲಾಗಿದೆ. 22 ಸೆಕ್ಷನ್‌ಗಳನ್ನು ಕೈಬಿಡಲಾಗಿದೆ, ಮತ್ತು 8 ಹೊಸ ಸೆಕ್ಷನ್‌ಗಳ ಸೇರ್ಪಡೆಯಾಗಿದೆ. ಅಪರಾಧ ಮತ್ತು ಅವುಗಳ ಸಂಬಂಧಿ ಅಧ್ಯಾಯಗಳನ್ನು ಮರುವಿಂಗಡಿಸಲಾಗಿದೆ.
ಶತಮಾನದ ಹಿಂದಿನಿಂದ ಚಾಲ್ತಿಯಲ್ಲಿದ್ದ ಅಪರಾಧದ ಸೆಕ್ಷನ್‌ಗಳು ಬೇರೆಯಾಗಿವೆ. ಉದಾಹರಣೆಗೆ ಈ ಹಿಂದೆ ಸೆಕ್ಷನ್ 302 ಎಂದರೆ ಕೊಲೆಗೆ ಶಿಕ್ಷೆ ಎಂದಾಗುತ್ತಿತ್ತು. ಈಗ ಅದು ಸೆಕ್ಷನ್ 101 ಎಂದು ಬದಲಾಗಿದೆ. ಸೆಕ್ಷನ್ 376 ಎಂದರೆ ರೇಪ್ ಎಂದು ಭಾವಿಸುತ್ತಿದ್ದೆವು. ಈಗ ರೇಪ್ ಸೆಕ್ಷನ್ 64 ಇಲ್ಲವೇ 65 ಆಗಿದೆ. ಅದೇ ರೀತಿ ಸೆಕ್ಷನ್ 379 ಎಂದರೆ ಕಳ್ಳತನದ ಕೃತ್ಯವೆಂದು ತಿಳಿಯುತ್ತಿದ್ದೆವು. ಈಗ ಕಳ್ಳತನ ಸೆಕ್ಷನ್ 303 ಆಗಿದೆ. ಸೆಕ್ಷನ್ 420 ಎಂದರೆ ಮೋಸವೆಂದು ತಿಳಿಯುತ್ತಿದ್ದೆವು. ಈಗ ಮೋಸಕ್ಕೆ ನಮೂದಾಗಿರುವ ಸೆಕ್ಷನ್ 318. ಸೆಕ್ಷನ್ 498 ಎ ಎಂದರೆ ವರದಕ್ಷಿಣೆಯ ಕಿರುಕುಳ ಎಂದು ನಮ್ಮ ಮನದಲ್ಲಿ ಮೂಡುತ್ತಿತ್ತು. ಈಗ ಆ ಅಪರಾದಕ್ಕೆ ನಮೂದಾಗಿರುವುದು ಸೆಕ್ಷನ್ 85.

ಹೀಗಾಗಲು ಇರುವ ಮುಖ್ಯ ಕಾರಣವೆಂದರೆ ಬಿ.ಎನ್.ಎಸ್‌ನಲ್ಲಿ ಒಂದೇ ಬಗೆಯ ಅಪರಾಧಗಳು ಮತ್ತು ಅವುಗಳ ಶಿಕ್ಷೆಯನ್ನು ಒಂದೇ ಅಧ್ಯಾಯದ ಅಡಿ ತರಲಾಗಿದೆ. ಇದಲ್ಲದೆ ಹಲವಾರು ಸೆಕ್ಷನ್‌ಗಳ ಮರುವಿಂಗಡನೆಯನ್ನು ಮಾಡಲಾಗಿದೆ.
ಹಳೆಯ ಕಾನೂನಿನಲ್ಲಿ “ಮಗು” [ಚೈಲ್ಡ್] ಎನ್ನುವ ಬಗ್ಗೆ ವ್ಯಾಖ್ಯಾನವಿರಲಿಲ್ಲ. ಬಿ.ಎನ್.ಎಸ್‌ನಲ್ಲಿ ಮಗು ಎಂದರೆ ಹದಿನೆಂಟು ವರ್ಷ ವಯಸ್ಸಿನ ಒಳಗಿರುವ ವ್ಯಕ್ತಿ ಎನ್ನಲಾಗಿದೆ. ಇದಕ್ಕೆ ಲಿಂಗಬೇಧವಿಲ್ಲ. ಹೊಸ ಕಾನೂನಿನಲ್ಲಿ ತೃತೀಯ ಲಿಂಗಿಗಳನ್ನು ಗುರುತಿಸಲಾಗಿದೆ. ಮಾನಸಿಕ ಅಸ್ವಸ್ಥತೆಯ ಬಗ್ಗೆ ಹೊಸದಾಗಿ ನಮೂದಿಸಲಾಗಿದೆ.

ಬಿ.ಎನ್.ಎಸ್‌ನಲ್ಲಿ ಮೊಟ್ಟಮೊದಲ ಬಾರಿಗೆ ಸಮುದಾಯ ಸೇವೆ ಎನ್ನುವ ಶಿಕ್ಷೆಯನ್ನು ನಮೂದಿಸಲಾಗಿದೆ. ಇದನ್ನು ಸಮಾಜದ ಒಳಿತಿಗಾಗಿ ನೀಃಶುಲ್ಕವಾಗಿ ಮಾಡುವ ಸೇವೆ ಎಂದು ನಮೂದಿಸಿದ್ದು ಯಾವ ರೀತಿಯ ಸೇವೆ, ಎಷ್ಟು ಅವಧಿಗೆ ಅದನ್ನು ಮಾಡಬೇಕು ಮುಂತಾದವನ್ನು ನ್ಯಾಯಾಲಯವೇ ನಿರ್ಧರಿಸಬೇಕೆಂದು ಸೂಚಿಸಲಾಗಿದೆ. ಈ ಶಿಕ್ಷೆಯನ್ನು 5000 ರೂ ಗಿಂತ ಕಡಿಮೆ ಮೌಲ್ಯದ ಕಳ್ಳತನ, ಆತ್ಮಹತ್ಯೆಗೆ ಪ್ರಯತ್ನವೂ ಸೇರಿದಂತೆ ಕೇವಲ ಆರು ಸಣ್ಣ ಅಪರಾಧಗಳಿಗೆ ಮಾತ್ರ ನೀಡಲಾಗುತ್ತದೆ. ಈ ಶಿಕ್ಷೆಯು ಭಾರತದ ಕ್ರಿಮಿನಲ್ ನ್ಯಾಯ ವ್ಯವಸ್ಥೆಯಲ್ಲಿ ಹೊಸತಾದರೂ ಹಲವಾರು ಪಾಶ್ಚಿಮಾತ್ಯ ದೇಶಗಳಲ್ಲಿ ಈಗಾಗಲೇ ಜಾರಿಯಲ್ಲಿದೆ. ಮರಣದಂಡನೆ, ಕಾರಾಗೃಹವಾಸ, ಜುಲ್ಮಾನೆಯಂತಹ ಶಿಕ್ಷೆಗಳು ಪ್ರತೀಕಾರ (ರೆಟ್ರಿಬ್ಯೂಷನ್) ರೂಪದ ಶಿಕ್ಷೆಗಳಾಗಿದ್ದರೆ, ಸಮುದಾಯ ಸೇವೆಯು ಒಬ್ಬ ಅಪರಾಧಿಯ ಪುನರ್ವಸತಿ (ರೀ ಹ್ಯಾಬಿಲಿಟೇಷನ್) ಮತ್ತು ಸಮಾಜದತ್ತ ಮರುಸಂಘಟನೆಯತ್ತ (ರೀ ಇಂಟೆಗ್ರೇಷನ್) ಒತ್ತು ನೀಡುತ್ತದೆ. ನ್ಯಾಯಿಕ ವ್ಯವಸ್ಥೆಯಲ್ಲಿ ಅಪರಾಧ ಹಾಗೂ ಶಿಕ್ಷೆಯ ನಡುವಿನ ಹೊಂದಾಣಿಕೆಯತ್ತ ಗಮನ ಹರಿಸುವ ಪ್ರಯತ್ನವಿದು. ಈ ಹೊಸ ಪ್ರಯತ್ನವು ಅಪರಾಧಿಗಳು ಮತ್ತೊಮ್ಮೆ ಅಪರಾಧ ಜಗತ್ತಿನತ್ತ ಹೋಗದಿರುವಂತೆ
ಯತ್ನಿಸುತ್ತದೆ. ಈ ಹೊಸ ಶಿಕ್ಷೆಯ ಕಾರಣದಿಂದ ಕಾರಾಗೃಹಗಳ ಮೇಲಿನ ಒತ್ತಡ ಕಡಿಮೆಯಾಗುತ್ತದೆ.

ಭಾರತದ ಸಾರ್ವಭೌಮತೆ, ಐಕ್ಯತೆ, ಹಾಗೂ ಅಖಂಡತೆಗೆ ಅಪಾಯವೊಡ್ಡುವ ಆತಂಕವಾದಿ ಕೃತ್ಯಗಳ ಬಗ್ಗೆ ಹೊಸದಾದ ಸೆಕ್ಷನ್ 113 ರೂಪಿಸಲಾಗಿದೆ. ಇದರನ್ವಯ ಯಾವ ವ್ಯಕ್ತಿಯು ಉದ್ದೇಶಪೂರ್ವಕವಾಗಿ ಯಾವುದೇ ವಿಧಾನಗಳಿಂದ ಭಾರತ ದೇಶವು ಪ್ರತ್ಯೇಕಗೊಳ್ಳಲು, ಇಲ್ಲವೇ ದೇಶದ ವಿರುದ್ಧ ದಂಗೆ ಮಾಡಲು, ಅಥವಾ ಪ್ರತ್ಯೇಕತಾವಾದಿ ಚಟುವಟಿಕೆಗಳನ್ನು ನಡೆಸುವ ಭಾವನೆಗಳನ್ನು ಪ್ರಚೋದಿಸಲು ಉತ್ತೇಜಿಸಿದರೆ ಇಲ್ಲವೇ ಉತ್ತೇಜಿಸಲು ಪ್ರಯತ್ನಿಸಿದರೆ, ಅಥವಾ ದೇಶದ ಅಖಂಡತೆಗೆ ಅಪಾಯವನ್ನುಂಟು ಮಾಡುವ ಕೃತ್ಯಗಳಲ್ಲಿ ಭಾಗವಹಿಸಿದರೆ ಇಲ್ಲವೇ ಕೃತ್ಯಗಳನ್ನು ನಡೆಸಿದ ಅವರಿಗೆ ಆಜೀವ ಕಾರಾಗೃಹವಾಸದವರೆಗೆ ಶಿಕ್ಷೆಯನ್ನು ನೀಡಬಹುದಾಗಿದೆ. ಐ.ಪಿ.ಸಿಯಲ್ಲಿ ದೇಶದ್ರೋಹದ ಅಪರಾಧಕ್ಕಾಗಿ ನಮೂದಿಸಲಾಗಿದ್ದ ಸೆಕ್ಷನ್ 124 ಏ ಅನ್ನು ಭಾರತೀಯ ನ್ಯಾಯ ಸಂಹಿತೆಯಲ್ಲಿ ಹಿಂಪಡೆಯಲಾಗಿದ್ದರೂ ಅಂತಹ ಅಪರಾಧಿಕ ಕೃತ್ಯಗಳನ್ನು ಸೆಕ್ಷನ್ 152 ರ ಅನ್ವಯ ಶಿಕ್ಷಿಸಬಹುದಾಗಿದೆ.
ಸಂಘಟಿತ ಅಪರಾಧ (ಆರ್ಗನೈಟ್ಸ್ ಕ್ರೈಮ್) ಮತ್ತು ಸಣ್ಣ ಪ್ರಮಾಣದ ಸಂಘಟಿತ ಅಪರಾಧಗಳ ಬಗ್ಗೆ ಬಿ.ಎನ್.ಎಸ್‌ನಲ್ಲಿ ವಿಶೇಷ ಗಮನವನ್ನು ಹರಿಸಲಾಗಿದೆ. ಸಂಘಟಿತ ಅಪರಾಧಗಳ ಅಡಿಯಲ್ಲಿ ಬರುವ ಕೆಲವು ಅಪರಾಧಗಳು ಯಾವುವೆಂದರೆ

LEAVE A REPLY

Please enter your comment!
Please enter your name here

Related Articles

TRENDING ARTICLES