July 23, 2025 4:13 am

ಬೆಂಗಳೂರಿನ ಮೊದಲ ಡಬಲ್ ಡೆಕ್ಕರ್ ಫೈಓವರ್ ನಿರ್ಮಾಣ ಪೂರ್ಣ

ಮುಂದಿನ ಎರಡು ಹಂತಗಳಲ್ಲಿ ನಾಲ್ಕು ಕಾರಿಡಾರ್‌ಗಳ ಉದ್ದಕ್ಕೆ ಮೆಟ್ರೋ ಮತ್ತು ಪ್ರೈಓವರ್‌ಗಳನ್ನು ನಿರ್ಮಾಣ ಮಾಡುವ ಸಾಧ್ಯತೆಗಳ ಬಗ್ಗೆ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಶನ್ ಲಿ. (ಬಿಎಂಆರ್‌ಸಿಎಲ್) ಅಧ್ಯಯನವನ್ನು ನಡೆಸುತ್ತಿದೆ.

ಈ ನಾಲ್ಕು ಕಾರಿಡಾರ್‌ಗಳೆಂದರೆ:

ಜೆಪಿ ನಗರ ನಾಲ್ಕನೇ ಹಂತದಿಂದ ಹೆಬ್ಬಾಳ ವರೆಗಿನ ಕಾರಿಡಾರ್-1 (29.2 4.2.)
ಹೊಸಹಳ್ಳಿಯಿಂದ ಕಡಬಗೆರೆ ವರೆಗಿನ 5-2 (11.45 5.2.)
ಸರ್ಜಾಪುರದಿಂದ ಇಬ್ಬಲೂರು ವರೆಗಿನ ಕಾರಿಡಾರ್-3 (14 ಕಿ.ಮೀ)
ಅಗರದಿಂದ ಕೋರಮಂಗಲ ಮೂರನೇ ಬ್ಲಾಕ್ ವರೆಗಿನ 5-4 (2.45 3.2.)

ಇದೆಲ್ಲಕ್ಕೆ ಮಾದರಿಯಾಗಿದ್ದು ನಾಗಪುರದಲ್ಲಿ ನಿರ್ಮಿಸಲಾಗಿರುವ ಡಬ್ಬಲ್‌ ಡೆಕ್ಕರ್ ರಸ್ತೆ. ಅದನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಮತ್ತು ಮಹಾರಾಷ್ಟ್ರ ಮೆಟ್ರೊ ರೈಲು ನಿಗಮ (MMRCL) ಜಂಟಿಯಾಗಿ ಇದನ್ನು ನಿರ್ಮಿಸಿದ್ದು 2022ರ ಅಕ್ಟೋಬರ್ ತಿಂಗಳಲ್ಲಿ ಇದರ ಉದ್ಘಾಟನೆಯಾಗಿದೆ. ನಾಗಪುರದ ವಾರ್ಧಾ ಹೆದ್ದಾರಿಯಲ್ಲಿ ಇದನ್ನು ನಿರ್ಮಿಸಲಾಗಿದ್ದು, ಇದನ್ನು ಡಬಲ್ ಡೆಕ್ಕರ್ ವಯಾಡಕ್ಟ್ ಎಂದು ಕರೆಯಲಾಗುತ್ತದೆ. 3.14 ಕಿ.ಮೀ. ಇದರ ಒಟ್ಟು ಉದ್ದ. ಅತ್ಯಂತ ಉದ್ದದ ಡಬಲ್ ಡೆಕ್ಕರ್ ವಯಾಡಕ್ಟ್ ಎಂಬ ಕಾರಣಕ್ಕೆ ಅದು ಗಿನ್ನೆಸ್ ದಾಖಲೆಗೂ ಪಾತ್ರವಾಗಿದೆ.
ಇದನ್ನು ಗಮನಿಸಿದ ರಾಜ್ಯ ಸರ್ಕಾರ ಬೆಂಗಳೂರಿನಲ್ಲಿಯೂ ಇಂತಹ ಮಾದರಿಯನ್ನು ಜಾರಿಗೆ ತರುವ ಸಲುವಾಗಿ ನಾಗಪುರಕ್ಕೆ ಉನ್ನತ ಮಟ್ಟದ ತಂಡವನ್ನು ಕಳಿಸಿ ಅಧ್ಯಯನವನ್ನು ಮಾಡಿದೆ. ಬಿಬಿಎಂಪಿ ಮತ್ತು ಮೆಟ್ರೋ ಅಧಿಕಾರಿಗಳು ಅಧ್ಯಯನವನ್ನು ನಡೆಸಿ ಸರ್ಕಾರಕ್ಕೆ ವಿಸ್ತ್ರತ ವರದಿಯನ್ನು ಸಲ್ಲಿಸಿತ್ತು. ಆ ಬಳಿಕ ಡಿ.ಕೆ.ಶಿವಕುಮಾರ್ ಅವರೂ ನಾಗಪುರಕ್ಕೆ ಭೇಟಿ ನೀಡಿ ಡಬಲ್ ಡೆಕ್ಕರ್ ವಯಾಡಕ್ಟ್ ಪರಿಶೀಲನೆ ನಡೆಸಿದ್ದರು. ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಬೆಂಗಳೂರು ನಗರಾಭಿವೃದ್ಧಿ
ಸಚಿವರಾಗಿದ್ದ ರಾಮಲಿಂಗಾರೆಡ್ಡಿ ಅವರು ಬಿಎಂಆರ್‌ಸಿಎಲ್ ಮುಖ್ಯಸ್ಥರಾಗಿದ್ದ ಕರೋಲಾ ಜೊತೆ ಡಬ್ಬಲ್ ಡೆಕ್ಕರ್ ರಸ್ತೆಯ ರೂಪುರೇಷೆಯನ್ನು ಚರ್ಚಿಸಿದ್ದರು. ಇವೆಲ್ಲ ಪ್ರಯತ್ನದ ಫಲವಾಗಿ ಇಂದು ದಕ್ಷಿಣ ಭಾರತದ ಮೊಟ್ಟ ಮೊದಲ ಡಬಲ್ ಡೆಕ್ಕರ್ ರಸ್ತೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದು ನಾಗಪುರದ ಡಬ್ಬಲ್‌ ಡೆಕ್ಕರ್ ರಸ್ತೆಗಿಂತ ಹೆಚ್ಚು ಉದ್ದದ ರಸ್ತೆ ಎಂಬ ಕೀರ್ತಿಗೂ ಭಾಜನವಾಗಿರುವುದು ವಿಶೇಷ.
ಈಗಾಗಲೇ ಕಾಮಗಾರಿ ಆರಂಭವಾಗಿರುವ ಮೆಟ್ರೋ ಮಾರ್ಗಗಳನ್ನು ಬಿಟ್ಟು ಉಳಿದ ಕಡೆಗಳಲ್ಲಿ ಮೆಟ್ರೋ ಯೋಜನೆಯನ್ನು ರೂಪಿಸುವ ಸಂದರ್ಭದಲ್ಲಿ ಇದೇ ರೀತಿಯ ಡಬ್ಬಲ್‌ಡೆಕ್ಕರ್ ರಸ್ತೆ ಯೋಜನೆಯನ್ನು ಜಾರಿಗೆ ತರಲಾಗುತ್ತದೆ. ಮುಂಬರುವ ವರ್ಷಗಳಲ್ಲಿ ನಗರದಲ್ಲಿ ನೂರು ಕಿ.ಮೀ. ಸಿಗ್ನಲ್ ಮುಕ್ತ ಕಾರಿಡಾರ್ ನಿರ್ಮಾಣ ಮಾಡಬೇಕು ಎಂಬುದು ಸರ್ಕಾರದ ಯೋಜನೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆಗೂ ಚರ್ಚೆ ಮಾಡಿದ್ದೇನೆ ಎಂದು ಬೆಂಗಳೂರು ನಗರದ ಅಭಿವೃದ್ಧಿಯ ಬಗ್ಗೆ ಸ್ಪಷ್ಟವಾದ ಚಿಂತನೆಯನ್ನು ಹೊಂದಿರುವ ಡಿ.ಕೆ.ಶಿವಕುಮಾರ್ ಅವರು ವಿವರಿಸಿದ್ದಾರೆ.

ಬೆಂಗಳೂರನ್ನು ಇನ್ನೊಂದು
ಸಿಂಗಾಪುರವನ್ನಾಗಿ ಮಾಡಬೇಕು ಎಂಬುದು ಹಳೆಯ ಘೋಷಣೆ. ಅಂತಹ ಘೋಷಣೆ ಹೊರಬಿದ್ದು ಅನೇಕ ವರ್ಷಗಳು ಸರಿದು ಹೋಗಿವೆ. ಸರ್ಕಾರಗಳೂ ಬದಲಾಗಿವೆ, ಒಂದುಕೈಯಿಂದ ಇನ್ನೊಂದಕ್ಕೆ ಅಧಿಕಾರವೂ ಬದಲಾಗಿದೆ. ಹೊಸ ಚಿಂತನೆಯ ಸರ್ಕಾರ, ಮಂತ್ರಿಗಳು, ಅಧಿಕಾರಿಗಳು ಬಂದಿದ್ದಾರೆ. ಬೆಂಗಳೂರು ಕೂಡ ನಾಲ್ಕೂ ದಿಕ್ಕಿನಲ್ಲಿ ಬೆಳೆಯುತ್ತ ಸಾಗಿದೆ. ಆ ನಿಟ್ಟಿನಲ್ಲಿ ಸಿದ್ದರಾಮಯ್ಯ ಸರ್ಕಾರ ರೂಪಿಸಿರುವುದು ‘ಬ್ರಾಂಡ್ ಬೆಂಗಳೂರು’ ಪರಿಕಲ್ಪನೆ. ಇಲ್ಲಿನ ಮೂಲಸೌಕರ್ಯ, ಸಂಚಾರ ವ್ಯವಸ್ಥೆ ಮತ್ತು ನಗರದ ಪ್ಲಾನಿಂಗ್‌ನಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟ ಅಳವಡಿಸಿಕೊಳ್ಳಬೇಕು ಎಂಬುದು ಇದರ ಹಿಂದಿನ ಉದ್ದೇಶ. ಜೊತೆಗೆ ‘ಎಲ್ಲರನ್ನೂ ಒಳಗೊಳ್ಳುವ’ ಪ್ರಕ್ರಿಯೆ ಇದರ ಹಿಂದಿನ ಜೀವದ್ರವ್ಯ. ಅದು ಸಾಧ್ಯವಾದಾಗ ಎಲ್ಲ ಅಭಿವೃದ್ಧಿಯೂ, ನಗರದ ಬೆಳವಣಿಗೆಯೂ ಸಹನೀಯವಾಗುತ್ತದೆ. ಜನಮುಖಿಯೂ ಆಗುತ್ತದೆ. ಇಂತಹ ಹೊತ್ತಿನಲ್ಲಿ ಬೆಂಗಳೂರು ನಗರಾಭಿವೃದ್ಧಿಯ ಹೊಣೆ ಹೊತ್ತಿರುವ ಡಿ.ಕೆ.ಶಿವಕುಮಾರ್ ಅವರಿಗೆ ಅದರ ಆಳ-ಅಗಲದ ಅರಿವಿದೆ. ಅದಕ್ಕೆ ತಕ್ಕ ಮೈಲಿಗಲ್ಲಿನಂತಿರುವುದು ಈ ಡಬ್ಬಲ್ ಡೆಕ್ಕರ್ ರಸ್ತೆ.

LEAVE A REPLY

Please enter your comment!
Please enter your name here

Related Articles

TRENDING ARTICLES