ರಾಜ್ಯದ ಎಲ್ಲಾ ಸರ್ಕಾರಿ ಮತ್ತು అనుదానికి ప్రాథమిక వాగని ಪ್ರೌಢಶಾಲಾ ಮಕ್ಕಳಿಗೆ ವಾರದ ಆರೂ ದಿನ ಮೊಟ್ಟೆ ಪೂರೈಕೆಗಾಗಿ ಅಜೀಂ ಪ್ರೇಮ್ ಜಿ ಪ್ರತಿಷ್ಠಾನವು 1500 ಕೋಟಿ ರೂ. ವೆಚ್ಚ ಭರಿಸಲು ರಾಜ್ಯ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡಿದೆ.
ರಾಜ್ಯ ಸರ್ಕಾರದ ಅಕ್ಷರ ದಾಸೋಹ-ಮಧ್ಯಾಹ್ನ ಬಿಸಿ ಉಪಾಹಾರ ಯೋಜನೆಯಡಿ ಅಜೀಂ ಪ್ರೇಮ್ ಜಿ ಪ್ರತಿಷ್ಠಾನದ ಸಹಭಾಗಿತ್ವದಲ್ಲಿ 2024-25 ಸಾಲಿನಲ್ಲಿ ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳಿಗೆ ಪೂರಕ ಪೌಷ್ಠಿಕ ಆಹಾರವನ್ನು ವಾರದಲ್ಲಿ 6 ದಿನಗಳು ಉಚಿತವಾಗಿ ವಿತರಿಸುವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತ್ತೀಚೆಗೆ ಚಾಲನೆ ನೀಡಿದ್ದಾರೆ.
ರಾಜ್ಯದ ಜನತೆಗೆ ಸಾಮಾಜಿಕ ಸಮಾನತೆಯನ್ನು ಸಾಧಿಸಲು ಹಲವಾರು ಜನೋಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಲ್ಲಿ ನಮ್ಮ ರಾಜ್ಯ ಸದಾ ಮುಂಚೂಣಿಯಲ್ಲಿದೆ. ಶಾಲಾ ಶಿಕ್ಷಣವನ್ನು ಬಲಪಡಿಸುವುದರೊಂದಿಗೆ ಮಕ್ಕಳ ಆರೋಗ್ಯಕ್ಕಾಗಿ ಪೌಷ್ಠಿಕ ಆಹಾರವನ್ನು ಪ್ರಾರಂಭಿಸಿರುವ ಕರ್ನಾಟಕ ಈ ದಿಕ್ಕಿನಲ್ಲಿ ಮತ್ತೊಂದು ಹೆಜ್ಜೆಯನ್ನು ಇರಿಸಿದೆ.
ಭವಿಷ್ಯದ ಪ್ರಜೆಗಳನ್ನು ಆರೋಗ್ಯವಂತರನ್ನಾಗಿಸಲು ಅಜೀಂ ಪ್ರೇಮ್ ಜಿ ಪ್ರತಿಷ್ಠಾನದೊಂದಿಗೆ ರಾಜ್ಯ ಸರ್ಕಾರ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಪ್ರತಿಷ್ಠಾನವು 1500 ಕೋಟಿ ರೂ.ಗಳನ್ನು ಮೂರು ವರ್ಷಗಳ ಅವಧಿಗೆ ವೆಚ್ಚ ಮಾಡಲಿದೆ. ಎಂಟನೇ ತರಗತಿಯಿಂದ 10ನೇ ತರಗತಿಯವರೆಗಿನ ಮಕ್ಕಳಿಗೆ ವಾರಕ್ಕೆರಡು ಬಾರಿ ಮೊಟ್ಟೆಯನ್ನು ಒದಗಿಸಲಾಗುತ್ತಿದ್ದು, ಈಗ ವಾರದ ಆರು ದಿನಗಳ ಕಾಲವೂ ಮೊಟ್ಟೆಗಳನ್ನು ನೀಡಲಾಗುವುದು. ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಪೌಷ್ಟಿಕಾಂಶ ದೊರಕಿಸಿಕೊಡುವುದು ಮತ್ತು ಪ್ರಾಥಮಿಕ ಶಿಕ್ಷಣವನ್ನು ಪ್ರೋತ್ಸಾಹಿಸುವುದು. ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ದಾಖಲಾತಿಯನ್ನು ಹೆಚ್ಚಿಸುವುದು ಮಧ್ಯಾಹ್ನದ ಬಿಸಿಯೂಟ ಯೋಜನೆಯ ಮುಖ್ಯ ಉದ್ದೇಶ.
ಮಧ್ಯಾಹ್ನ ಬಿಸಿಯೂಟ యాజనగాగి వాషిF రూ.1552 ಕೋಟಿಗಳನ್ನು ಒದಗಿಸಲಾಗಿದ್ದು, ಬಿಸಿಯೂಟದೊಂದಿಗೆ ಪೂರಕಪೌಷ್ಠಿಕ ಆಹಾರವಾಗಿ ವಾರದ 5 ದಿನಗಳಿಗೆ ಕೆನೆ ಭರಿತ ಹಾಲು, 3 ದಿನಗಳಿಗೆ ರಾಗಿ ಮಾಲ್ಟ್, ವಾರಕ್ಕೆ 2 ದಿನಗಳಂತೆ ವಾರ್ಷಿಕ 80 ದಿನಗಳಿಗೆ ಮೊಟ್ಟೆ, ಮೊಟ್ಟೆ ಸೇವಿಸದ ವಿದ್ಯಾರ್ಥಿಗಳಿಗೆ ಶೇಂಗಾ ಚಿಕ್ಕಿ ಅಥವಾ ಬಾಳೆಹಣ್ಣುಗಳನ್ನು ವಿತರಿಸಲಾಗುತ್ತಿದೆ. ಬಿಸಿಯೂಟ ಕಾರ್ಯಕ್ರಮದ ಮೂಲಕ ಮಕ್ಕಳ ಆರೋಗ್ಯಕರ ಬೆಳವಣಿಗೆಗೆ, ಪೌಷ್ಠಿಕ ವೃದ್ಧಿಗೆ ಸರ್ಕಾರವು ಕಾಳಜಿಯಿಂದ ಪ್ರೋತ್ಸಾಹ ನೀಡುತ್ತಿದೆ.
ಸರ್ಕಾರದ ಈ ಸದುದ್ದೇಶದ ಬಿಸಿಯೂಟಿ ಯೋಜನೆಯ ಕಾರ್ಯಕ್ರಮಕ್ಕೆ ಆಜೀಂ ಪೇಮ್ ಜಿ ಸಂಸ್ಥೆಯವರ ಉದಾರ ಸಹಕಾರದಿಂದಾಗಿ ಮತ್ತಷ್ಟು ಬಲ ಬಂದಂತಾಗಿದೆ. ಮಕ್ಕಳ ಆರೋಗ್ಯ ಅಭಿವೃದ್ಧಿಗಾಗಿ ಬಹು ಪೋಷಕಾಂಶಗಳ ಕೊರತೆಯನ್ನು ನೀಗಿಸಲು ಪೂರಕ ಪೌಷ್ಠಿಕ ಆಹಾರವನ್ನು ವಾರದ ಎಲ್ಲಾ ದಿನಗಳಿಗೂ ವಿಸ್ತರಿಸಿ ಇದಕ್ಕಾಗಿ ಮುಂದಿನ 3 ವರ್ಷಗಳಿಗೆ ರೂ.1500 ಕೋಟಿಗಳನ್ನು ಭರಿಸಲು ಮುಂದೆ ಬಂದಿರುವುದು ಉದಾರಚರಿತರು ಮಾತ್ರ ಮಾಡಲು ಸಾಧ್ಯವಿರುವ ಕಾರ್ಯ,
‘ಆಡದೆ ಮಾಡುವವನು ರೂಢಿಯೊಳಗುತ್ತಮ. ಆಡಿ ಮಾಡುವವನು ಮಧ್ಯಮನು, ಆಡಿಯೂ ಮಾಡದವನು ಅಧಮನು..’ ಎಂಬ ಸರ್ವಜ್ಞನ ಈ ತ್ರಿಪದಿಯಂತೆ ಆಡದೇ ಮಾಡಿ ಕೃತಿಯೇ ಮಾತಿನ ಪ್ರತಿನಿಧಿಯಾಗುವಂತೆ ಬದುಕುತ್ತಿರುವ ಅಜೀಂ ಪ್ರೇಮ್ ಜಿ ಅವರಂತವರು ಹೆಚ್ಚಾಗಲಿ.