varthajanapadha

ಬಿಸಲ ನಾಡು ರಾಯಚೂರು ಈಗ ಹಚ್ಚಹಸಿರಿನಿಂದ ಕಂಗೊಳಿಸುತ್ತಿದ್ದು, ಪ್ರಕೃತಿ ಪ್ರಿಯರನ್ನು ಕೈ ಬೀಸಿ ಕರೆಯುತ್ತಿದೆ

ಮುಂಗಾರು ಮಳೆ ಆರಂಭವಾಗುತ್ತಿದ್ದಂತೆ ರಾಯಚೂರು ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿನ ಬೆಟ್ಟ ಗುಡ್ಡಗಳಲ್ಲಿ ಮರಗಿಡಗಳು ಸಮೃದ್ಧವಾಗಿ ಬೆಳೆದು ನಿಂತಿವೆ. ಜಿಲ್ಲೆಯ ಅನ್ವರಿ ಸಂಪರ್ಕಿಸುವ ರಸ್ತೆಯಲ್ಲಿನ ಅರಣ್ಯ ಪ್ರದೇಶ ಹಸಿರು ತೊಪ್ಪಲು ಹೊದ್ದು ಕಂಗೊಳಿಸುತ್ತಿದ್ದು, ಕಣ್ಣನ ಸೆಳೆಯುತ್ತಿದೆ.
ಕಳೆದ ವರ್ಷ ಮಳೆ ಬಾರದೆ ಬರಗಾಲದಿಂದ ಸುತ್ತಮುತ್ತಲಿನ ಬೆಟ್ಟಗುಡ್ಡಗಳು ಭಣಗುಡುತ್ತಿದ್ದವು. ಅರಣ್ಯ ಪ್ರದೇಶದಲ್ಲಿ ಸಸ್ಯರಾಶಿ ಒಣಗಿ ಜೀವಕಳೆ ಇಲ್ಲದಂತಾಗಿತ್ತು. ಈ ಬಾರಿಯ ಮುಂಗಾರು ಮಳೆಗೆ ಗಿಡಮರಗಳು ಚಿಗುರಿ, ಪರಿಸರಕ್ಕೆ ಜೀವಕಳೆ ಬಂದಿದೆ. ಸದ್ಯ ಇಲ್ಲಿನ ಪ್ರದೇಶ ಹಚ್ಚಹಸಿರಿನಿಂದ ನಳನಳಿಸುತ್ತಿರುವುದರಿಂದ ಜನರು ಕಾಣಿಸಿಕೊಳ್ಳಹತ್ತಿದ್ದಾರೆ.
ಜಿಲ್ಲೆಯ ಕವಿತಾಳನಿಂದ 5ಕಿ.ಮೀ ದೂರದ ಅರಣ್ಯ ಇಲಾಖೆಯ ಕೆ.ತಿಮ್ಮಾಪುರ ಸಸ್ಯಕ್ಷೇತ್ರದವರಗೆ ರಸ್ತೆಯ ಎರಡೂ ಬದಿ ಹಚ್ಚಹಸಿರು ಕಣ್ಣಿಗೆ ತಂಪನ್ನು ನೀಡುತ್ತಿದೆ. ಕಣ್ಣಿಗೆ ಕಾಣುವಷ್ಟು ದೂರವೂ ಹಸಿರಿನಿಂದ ಕಂಗೊಳಿಸುತ್ತಿದೆ. ತಿರುವು ಏರಿಳಿತಗಳಿಂದ ಕೂಡಿದ ರಸ್ತೆ ಈಚೆಗೆ ಮರಸ್ತಿಯಾಗಿದ್ದು, ವಾಹನ ಸವಾರರಿಗೆ ಖುಷಿ ನೀಡುತ್ತಿದೆ. ಚಾಲಕರಿಗೆ ಫಾಟ್ ಪ್ರದೇಶದಲ್ಲಿ ವಾಹನ ಓಡಿಸಿದಂತೆ ಮುದ ನೀಡುತ್ತದೆ.
ಹಸಿರ ಹೊದಿಕೆಯ ಮಧ್ಯೆದಲ್ಲಿ ಅಲ್ಲೊಂದು ಇಲ್ಲೊಂದು ಹೂವು ಮುಡಿದಂತೆ ಕಾಣುವ ಕೆಂಪು ಹೂವು ಬಿಟ್ಟ ಮರಗಳು, ಎದುರಿನಲ್ಲಿ ಪವನ ವಿದ್ಯುತ್ ಉತ್ಪಾದಿಸುವ ತಿರುಗುವ ಪ್ಯಾನ್‌ಗಳು ಮತ್ತು ಸೋಲಾರ್ ವಿದ್ಯುತ್ ಉತ್ಪಾದನಾ ಫಲಕಗಳಿಂದ ಮೂಡಿ ಬರುವ ಕಣ್ಣು ಕುಕ್ಕುವ ಬೆಳಕು. ತಲೆಮೇಲೆ ಹಾಯ್ದು ಹೋಗುವ ಕರಿಮೋಡಗಳು, ಹೊಸದೊಂದು ಅನುಭವವನ್ನೇ ಉಂಟು

ಮಾಡುತ್ತವೆ. ಫೋಟೋ ಶೂಟ್ మాడలు బయనువ యువకరు. ಪ್ರಕೃತಿ ಪ್ರಿಯರಿಗೆ ಸದ್ಯ ಈಗ ಇದು ಪಿಕ್ನಿಕ್ ತಾಣ ಎನಿಸಿದೆ.
ಮನೆಯಿಂದಲೇ ಬುತ್ತಿಕಟ್ಟಿಕೊಂಡು ಒಂದು ದಿನದ ಜಾಲಿ ರೈಡ್ ಮಾಡುತ್ತಿರುವ ಜನರು ಬೆಳಿಗ್ಗೆಯಿಂದ ಸಂಜೆ ತನಕ ಈ ಪ್ರಕೃತಿ ಮಡಿಲಲ್ಲಿ మక్కళ్ళిందిన మిషియండ ಕಳೆಯುತ್ತಿದ್ದಾರೆ. ಜಿಲ್ಲೆಯ ಕವಿತಾಳ ದಿಂದ ಆನ್ವರಿ ಸಂಪರ್ಕಿಸುವ ರಸ್ತೆ ಅಂಕುಡೊಂಕಾಗಿರುವುದರಿಂದ ಮತ್ತು ಬದಿಯಲ್ಲಿ ಬೆಳೆದಿರುವ ಹಸಿರು ಗಿಡಗಳಿಂದ ಘಾಟ್ ರಸ್ತೆಯಂತೆ ಭಾಸವಾಗುತ್ತಿರುವುದು ಪ್ರವಾಸಿಗರಿಗೆ ಆಕರ್ಷಣೆಯುಂಟು ಮಾಡಿದೆ.
ಮಳೆಗೆ ತುಂಬಿದ ಕಿರು ಜಲಾಶಯಗಳು:
ಸಣ್ಣ ನೀರಾವರಿ ಇಲಾಖೆಯಿಂದ ಅಂದಾಜು 2.5 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಿರುವ ಕಿರು ಜಲಾಶಯ ಕಾಮಗಾರಿ ಒಂದು ತಿಂಗಳ ಹಿಂದಷ್ಟೆ ಪೂರ್ಣಗೊಂಡಿದೆ. ಈಚೆಗೆ ಸುರಿದ ಧಾರಾಕಾರ ಮಳೆಗೆ ಜಲಾಶಯ ತುಂಬಿ ಹರಿಯುತ್ತಿದ್ದು, ನೀರಿನ ಜುಳುಜುಳು ಶಬ್ದ ಎಲ್ಲರ ಗಮನ ಸೆಳೆಯುತ್ತಿದೆ.
0 350 4໖ ໙ 5 ಅಡಿ ಎತ್ತರವಿರುವ ಈ ಜಲಾಶಯವನ್ನು ಹಳ್ಳದ ನೀರು ಹರಿದು ಬರುವಂತೆ ಇಂಗ್ಲೀಷ್ ಅಕ್ಷರದ ‘ಯು’ ಆಕಾರದ ವಿನ್ಯಾಸದಲ್ಲಿ ನಿರ್ಮಾಣ ಮಾಡಲಾಗಿದೆ. ಕೆಳ ಹಾಗೂ ಮೇಲ್ಬಾಗದಲ್ಲಿ 100 ಮೀಟ‌ರ್ ಸುತ್ತಳತೆಯಲ್ಲಿ ಸ್ವಚ್ಛತೆ ಮಾಡಿ ಕಲ್ಲು ಹಾಸಲಾಗಿದೆ. 300 ಮಿ. ಕ್ಯೂಸೆಕ್ ಅಡಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದ್ದು, 80 ರಿಂದ 90 ಎಕರೆ ಪ್ರದೇಶಕ್ಕೆ ನೀರಾವರಿ ಒದಗಿಸುತ್ತದೆ ಎಂದು ಅಂದಾಜಿಸಲಾಗಿದೆ.
ಧುಮ್ಮಿಕ್ಕುತ್ತಿರುವ ಗೋಲಪಲ್ಲಿ ಜಲಪಾತ:
ಬಿಸಿಲ ನಾಡಾದ ರಾಯಚೂರು ಜಿಲ್ಲೆಯಲ್ಲಿ ಜಲಪಾತಗಳು, ಪ್ರಕೃತಿ ಸೌಂದರ್ಯ ತಾಣಗಳು ಕಡಿಮೆ ಎನ್ನುವವರೆ ಹೆಚ್ಚು. ಆದರೆ ಇಲ್ಲಿಯೂ ಪ್ರಕೃತಿ ಸೌಂದರ್ಯದ ತಾಣಗಳಿವೆ
ಎಂಬುದಕ್ಕೆ ಉದಾಹರಣೆ ಲಿಂಗಸಗೂರು ತಾಲೂಕಿನ ಗುಡಗುಂಟಾ ಬಳಿಯಲ್ಲಿರುವ ಗೋಲಪಲ್ಲಿ ಜಲಪಾತ, ಗುಡ್ಡದಿಂದ ಧುಮ್ಮಿಕ್ಕುವ ಗೋಲಪಲ್ಲಿ ಜಲಾಶಯವು ಈಗ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ.
ಜಲಪಾತವು ಲಿಂಗಸಗೂರಿನಿಂದ ಸುರಪುರಕ್ಕೆ ಹೋಗುವ ರಾಷ್ಟ್ರೀಯ ಹೆದ್ದಾರಿಯಾದ ಬೀದರದಿಂದ ಶ್ರೀರಂಗಪಟ್ಟಣ ಮಾರ್ಗ ಹೋಗುವ ರಸ್ತೆಯ ಪಕ್ಕದಲ್ಲೇ ಇದ್ದು, ಜಲಪಾತದ ನೀರು ಧುಮ್ಮಿಕ್ಕುವ ದೃಶ್ಯ ದೂರದಿಂದಲೇ ಸ್ಪಷ್ಟವಾಗಿ ಕಾಣುತ್ತದೆ.
ಗುಡಗುಂಟಾದಿಂದ ಸುಮಾರು 4ಕಿ.ಮೀ ದೂರದ ನಂತರ ಅರ್ಧ ಕಿಮೀ ದೂರ ಬೈಕ್‌ಗಳು ಮಾತ್ರ ಹೋಗುವಂತ ರಸ್ತೆ ಇದೆ. ಈ ರಸ್ತೆಯಲ್ಲಿ ಹೋದರೆ ಹೊಳೆಯಂತೆ ಹರಿಯುವ ಹಳ್ಳದ ನೀರು ಗುಡ್ಡದ ಕಲ್ಲುಗಳ ಮಧ್ಯೆ ಭೋರ್ಗರೆಯುತ್ತಾ ಹರಿಯುವ ಜಲಪಾತ ಸಿಗಲಿದೆ.
ಮೊದಲು ಈ ಜಲಪಾತ ಸಣ್ಣದಾಗಿ ಹರಿಯುತ್ತಿತ್ತು. ನಾರಾಯಣಪುರ ಬಲದಂಡೆಯಾದ ನಂತರ ಬಲದಂಡೆಯ ನೀರು ಸಹ ಗೋಲಪಲ್ಲಿ ಹಳ್ಳಕ್ಕೆ ಬರುತ್ತಿರುವುದರಿಂದ ಸಾಮಾನ್ಯವಾಗಿ
다 8-9 30 ತುಂಬಿ ಹರಿಯುತ್ತಿದೆ.
ಐದು ಸುತ್ತಿನ ಜಲದುರ್ಗ ಕೋಟೆ:
ಜಲದುರ್ಗದ ಕೋಟೆ ಎಂದರೆ. ಹೆಸರೇ ಹೇಳುವಂತೆ ನೀರಿನ ಮೇಲಿನ ಕೋಟೆ ಎಂದರ್ಥ. ಅಲ್ಲಿ, ಎತ್ತ ನೋಡಿದರೂ, ಕಣ್ಣು ಹಾಯಿಸಿದಷ್ಟು ಬರಿ ಗುಡ್ಡ ಬಂಡೆಕಲ್ಲುಗಳು ಕಾಣುತ್ತವೆ. ಕಾಲು ಇಟ್ಟಲೆಲ್ಲ ಹಸಿರ ಹೊದಿಕೆ. ಎತ್ತರಕ್ಕೆ ಬೆಳೆದ ಮರಗಳು, ಪಾಳು ಬಿದ್ದಿರುವ ಕೋಟೆಗಳ ಅವಶೇಷಗಳು, ಬುರುಜು, ಪಕ್ಕಕ್ಕೆ ಪ್ರಶಾಂತವಾಗಿ ಹರಿಯುತ್ತಿರುವ ಕೃಷ್ಣಾ ನದಿ. ಇದು ಐದು ಸುತ್ತಿನ ಜಲದುರ್ಗ ಕೋಟೆಯ ನೋಟ. ಲಿಂಗಸುಗೂರಿನಿಂದ ಜಲದುರ್ಗ ಕೋಟೆಗೆ ಕೇವಲ ಅರ್ಧ ಗಂಟೆ ಪ್ರಯಾಣ.

12ನೇ ಶತಮಾನದ ಆಸುಪಾಸಿನಲ್ಲಿ ದೇವಗಿರಿಯ ಯಾದವರು ಈ ಕೋಟೆ ನಿರ್ಮಾಣ ಆರಂಭಿಸಿದರು. ಅವರ ನಂತರ ಬಂದ ಬಹುಮನಿ ಸುಲ್ತಾನರು ಹಾಗೂ ವಿಜಯನಗರದ ಅರಸರು ಈ ಕೋಟೆಯ ಅಭಿವೃದ್ಧಿ ಕಾರ್ಯ ಮುಂದುವರಿಸಿದರು. 1489 ರಿಂದ 1686 ರವರೆಗೆ ಆಳ್ವಿಕೆ ನಡೆಸಿದ್ದ ವಿಜಾಪುರ ಸುಲ್ತಾನರಲ್ಲಿ ಆದಿಲ್‌ ಶಾಹಿ ಈ ಕೋಟೆಯನ್ನು ಪೂರ್ಣಗೊಳಿಸಿದರು. ಕೋಟೆಯನ್ನು ಸೈನ್ಯ ಬೀಡುಬಿಡಲು ಹಾಗೂ ಕೈದಿಗಳನ್ನು ಬಂಧಿಸಿಡಲು ಬಳಸುತ್ತಿದ್ದರು. ಇಲ್ಲಿನ ಕಾವಲು ಗೋಪುರದ ಮೇಲೆ ನಿಂತುಕೊಂಡು ಸೈನಿಕರು ರಾತ್ರಿ ವೇಳೆ ದೀವಟಿಗೆಯ ಬೆಳಕಿನಲ್ಲಿ ಕಾವಲು ಕಾಯುತ್ತಿದ್ದರು.
ನೆಲದಿಂದ 500 ರಿಂದ 600 ಆಡಿ ಎತ್ತರದಲ್ಲಿರುವ ಕೋಟೆಯ ಮೇಲೆ ಗೋಲಾಕಾರದ ತೊಟ್ಟಿಲು ಕಟ್ಟಲಾಗಿದೆ. ಆಗಿನ ಕಾಲದಲ್ಲಿ ಮರಣದಂಡನೆಗೆ ಗುರಿಯಾದ ಅಪರಾಧಿಗಳನ್ನು ಆ ತೊಟ್ಟಿಲಿನಲ್ಲಿ ಕೂರಿಸಿ ಅದನ್ನು ಪಕ್ಕದಲ್ಲಿ ಹರಿಯುತ್ತಿರುವ ನದಿಗೆ ತಳ್ಳಲಾಗುತ್ತಿತ್ತು ಎಂದು ಸ್ಥಳೀಯರು ಹೇಳುತ್ತಾರೆ. ಈಗ ತೊಟ್ಟಿಲು ಹಾಳಾಗಿದೆ.
ಜಲದುರ್ಗ ಕೇವಲ ಕಲ್ಲು ಕಟ್ಟಡಗಳ ಜಾಗವಷ್ಟೇ ಅಲ್ಲ, ಇಲ್ಲಿನ ನೆಲದಲ್ಲಿ ಗಿಡಮೂಲಿಕೆಗಳಿವೆ. ರಾಜರ ಕಾಲದಲ್ಲಿ ಇದು ಗಿಡಮೂಲಿಕೆಗಳ ಕಾಡಾಗಿತ್ತಂತೆ. ಈಗಲೂ ನಾಟಿ ವೈದ್ಯರು ಇಲ್ಲಿಂದ ಗಿಡಮೂಲಿಕೆಗಳನ್ನು ಸಂಗ್ರಹಿಸುತ್ತಾರಂತೆ.

Exit mobile version