ವಿಶ್ವದ ಭೂಪಟದಲ್ಲಿ ಬೆಂಗಳೂರಿಗೆ ವಿಶೇಷ ಸ್ಥಾನ. ಇದು ಸಿಲಿಕಾನ್ ಸಿಟಿ, ಗಾರ್ಡನ್ ನಗರಿ, ಮಾಹಿತಿತಂತ್ರಜ್ಞಾನದ ತೊಟ್ಟಿಲು. ವರ್ಷದ ಬಹುತೇಕ ತಿಂಗಳು. ಇಲ್ಲಿರುವುದು ಸಹನೀಯ ಹವಾಮಾನ. ಅರ್ಧಕ್ಕರ್ಧ ನಗರವನ್ನು ಸುತ್ತುವರಿದಿರುವ ಮೆಟ್ರೊರೈಲು, ವರ್ತುಲ ರಸ್ತೆಗಳು, ಎಕ್ಸಪ್ರೆಸ್ ಹೈವೆ, ವಿಶ್ವದರ್ಜೆಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ... ಹೀಗೆ ಇಲ್ಲಿ ಜಗತ್ತಿನ ಅನೇಕ ನಗರಿಗಳಿಗೆ ಹೆಗಲೆಣೆಯಾಗಿ ನಿಲ್ಲುವ ಮೂಲಸೌಕರ್ಯಗಳು, ಬಹುಶಃ ಬೆಂಗಳೂರೆಂಬ ಸುಂದರಿಯನ್ನು...